ಡಿಸೆಂಬರ್.14 ರಂದು ಬಡಾಕೆರೆ ಶಾಲೆ ಸ್ನೇಹ ಸಮ್ಮಿಲನ,ಶಾಲಾ ವಾರ್ಷಿಕೋತ್ಸವ
ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಉತ್ತರ) ಬಡಾಕೆರೆಯಲ್ಲಿ ಡಿಸೆಂಬರ್ 14.ರಂದು ಸ್ನೇಹ ಸಮ್ಮಿಲನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.
ಸ್ನೇಹ ಸಮ್ಮಿಲನ ಹಾಗೂ ಶಾಲಾ ವಾರ್ಷಿಕೋತ್ಸವ ಅಂಗವಾಗಿ ಬೆಳಿಗ್ಗೆ 11 ರಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ನೃತ್ಯ ತಂಡದಿಂದ ನೃತ್ಯ ವೈಭವ,12.30 ರಿಂದ 1.30 ರ ತನಕ ಗುರು ವಂದನಾ ಕಾರ್ಯಕ್ರಮ,2.30 ರಿಂದ ವಿವಿಧ ಶಾಲಾ ಮಕ್ಕಳಿಂದ ನಾಟ್ಯ ವೈಭವ,ನೃತ್ಯ ಸ್ಪರ್ಧಾ ಕಾರ್ಯಕ್ರಮ.4.30 ರಿಂದ 5.30 ರ ತನಕ ಶಾಲಾ ಶಿಕ್ಷಕಿಯರು ಹಾಗೂ ಹಳೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ.5.30 ರಿಂದ 7.30 ರ ತನಕ ಶಾಲಾ ಮಕ್ಕಳಿಂದ ಸಾಂಸ್ಕøತಿಕ ವೈಭವ ಕಾರ್ಯಕ್ರಮ ಜರುಗಲಿದೆ.
7.30 ರಿಂದ 9.30 ರ ತನಕ ಸಭಾ ಕಾರ್ಯಕ್ರಮ ನಡೆಯಲಿದೆ.9.30 ರಿಂದ 10.30 ರ ತನಕ ಸ್ಥಳೀಯ ಹಳೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.ರಾತ್ರಿ 10.30 ರಿಂದ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ಹಾಸ್ಯಮಯ ನಗೆ ನಾಟಕ ವಾಚ್ಮ್ಯಾನ್ ಪ್ರದರ್ಶನ ಗೊಳ್ಳಲಿದೆ.ಎಲ್ಲಾ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಾಲಾ ಸಮಿತಿ ಕೋರಿ ಕೊಂಡಿದೆ.
ಇವೊಂದು ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು,ಶಾಸಕರು,ಮಾಜಿ ಶಾಸಕರು,ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.