ಚಿನ್ನವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಗಂಗೊಳ್ಳಿ ಠಾಣೆ ಸಿಬ್ಬಂದಿ

ಕುಂದಾಪುರ:ಎಸ್‍ಬಿಐ ಬ್ಯಾಂಕ್ ಬಳಿ ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಗಂಗಾಧರ ಪೂಜಾರಿ ಅವರಿಗೆ ಸಿಕ್ಕಿರುವ ಸುಮಾರು 13 ಗ್ರಾಂ ತೂಕವನ್ನು ಹೊಂದಿದ ಅಂದಾಜು ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನವನ್ನು ವಾರೀಸುದಾರರಾದ ಕುಂದಾಪುರ ಚಿಕ್ಕನ್ ಸಾಲ್ ರೋಡ್ ನಿವಾಸಿ ರಾಕೇಶ್ ಬೆರಟ್ಟೊ ಅವರಿಗೆ ಮರಳಿಸುವುದರ ಮುಖೇನ ಪ್ರಾಮಾಣಿಕತೆ ಮೆರೆದಿದ್ದಾರೆ.ಗಂಗೊಳ್ಳಿ ಠಾಣೆ ಪಿಎಸ್‍ಐ ಪವನ್ ನಾಯ್ಕ್ ಹಸ್ತಾಂತರ ಮಾಡಿದರು.