ಫಲಾನುಭವಿಗಳಿಗೆ ಕನ್ನಡಕ ವಿತರಣೆ
ಕುಂದಾಪುರ:ಎಲ್.ಜಿ ಫೌಂಡೇಶನ್ ವತಿಯಿಂದ ಪಡುಕೋಣೆ ಶಾಲೆಯಲ್ಲಿ ಇತ್ತೀಚಿಗೆ ನಡೆದ ನೇತ್ರ ಚಿಕಿತ್ಸಾ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.ಸುರೇಶ ದೇವಾಡಿಗ ಹಾಗೂ ಪಡುಕೋಣೆ ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ ಮತ್ತು ಶ್ರೀಧರ ಹೊಸ್ಮನೆ ಉಪಸ್ಥಿತರಿದ್ದರು.