ವಲಸಿಗರಿಂದ ಹೋಳಿ ಹಬ್ಬ ಆಚರಣೆ
ಕುಂದಾಪುರ:ತಾಲೂಕಿನ ಮುಳ್ಳಿಕಟ್ಟೆ ಸಮೀಪ ಹಾದುಗೋಗಿರುವ ರಾಷ್ಟ್ರೀಯ ಹೆದ್ದಾರಿ-66 ಪಕ್ಕದ ಜಾಗದಲ್ಲಿ ಟೆಂಟ್‍ಗಳನ್ನು ಹಾಕಿಕೊಂಡು ವಾಸಮಾಡುವ ಮರಾಠ ಸಮುದಾಯದ ವಲಸಿಗ ಕುಟುಂಬದ ಸದಸ್ಯರು ಹೋಳಿ ಹಬ್ಬವನ್ನು ಐದು ದಿನಗಳ ಕಾಲ ವಿಶೇಷವಾದ ರೀತಿಯಲ್ಲಿ ಆಚರಿಸಿಕೊಳ್ಳುತ್ತಾರೆ.
ಕೈಯಲ್ಲಿ ತಮಟೆ ಹಿಡಿದು ಕುಣಿತ ದೊಂದಿಗೆ ಹಾಡಿಕೊಂಡು ಬರುವ ಹೋಳಿ ತಂಡದ ಸದಸ್ಯರು ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಕಾಣಿಕೆಯನ್ನು ಪಡೆದುಕೊಂಡು ಬಣ್ಣವನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ.ಸೇವೆ ರೂಪದಲ್ಲಿ ಪಡೆದ ಕಾಣಿಕೆ ಹಣವನ್ನು ಒಟ್ಟುಗೂಡಿಸಿ ಪೂಜಾ ಸಾಮಾಗ್ರಿಗಳನ್ನು ಖರೀದಿಸಿ,ಮೊದಲನೆ ದಿನ ಕಾಮನನ್ನು ನಿರ್ದಿಷ್ಟ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸಿ,ಐದನೇ ದಿನ ಕಾಮನನ್ನು ದಹಿಸುವುದರ ಮುಖೇನ ಹೋಳಿ ಹಬ್ಬವನ್ನು ವಿಶಿಷ್ಟವಾದ ರೀತಿಯಲ್ಲಿ ವಲಸಿಗ ಕುಟುಂಬದವರು ಆಚರಣೆ ಮಾಡುತ್ತಾರೆ.ಇದು ಅವರ ಸಂಸ್ಕøತಿಯ ಪ್ರತಿಕವಾಗಿದೆ.