ಮರವಂತೆ:ಕಡಲಿನಲ್ಲಿ ಅಪರಿಚಿತ ಶವ ಪತ್ತೆ
ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಸಮೀಪ ಸಮುದ್ರದಲ್ಲಿ ಸುಮಾರು 45 ಪಾಯಿಂಟ್ ನೀರಿನಲ್ಲಿ ಗಂಡಸಿನ ಅಪರಿಚಿತ ಶವ ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆ ಆಗಿದೆ.
ಟಿ ಶರ್ಟ್ ಧರಿಸಿರುವ ವ್ಯಕ್ತಿ ಕಪ್ಪು ಬಣ್ಣದ ಚುಕ್ಕಿಯನ್ನು ಹೊಂದಿರುವ ಬರ್ಮೂಡ ಚಡ್ಡಿ ಧರಿಸಿದ್ದು.ಕೈಯಲ್ಲಿ ಎಸ್.ವಿ ಎನ್ನುವ ಇಂಗ್ಲಿಷ್ ಅಕ್ಷರದೊಂದಿಗೆ ಹಚ್ಚೆ ಹಾಕಿಸಿಕೊಂಡಿದ್ದಾರೆ.ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿರುವ ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.ಮೀನುಗಾರರು ನೀಡಿದ ಮಾಹಿತಿ ಮೇರೆಗೆ ಜೀವ ರಕ್ಷಕ ತಂಡದ ಮುಳುಗು ತಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಮತ್ತು ವೆಂಕಟೇಶ ಖಾರ್ವಿ,ಪ್ರಶಾಂತ ಖಾರ್ವಿ,ಸಚಿನ್ ಖಾರ್ವಿ,ದತ್ತ ಖಾರ್ವಿ ದೋಣಿ ಮೂಲಕ ಸಮುದ್ರಕ್ಕೆ ತೆರಳಿ 45 ಪಾಯಿಂಟ್ ನೀರಿನಲ್ಲಿ ತೇಲುತ್ತಿದ್ದ ಅಪರಿಚಿತ ಶವವನ್ನು ದಡಕ್ಕೆ ತರುವುದರ ಮುಖೇನ ರಕ್ಷಿಸಿದ್ದಾರೆ.ವಿಶ್ವನಾಥ ಗಂಗೊಳ್ಳಿ ಸಹರಿಸಿದರು.ಇಬ್ರಾಹಿಂ ಗಂಗೊಳ್ಳಿ ಶವವನ್ನು ಸಾಗಿಸಲು ನೆರವಾದರು.ಗಂಗೊಳ್ಳಿ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿದ ಶವ ಮಹಜರು ನಡೆಸಿದರು.