ಸರಕಾರಿ ಹಿರಿಯ ಪ್ರಾಥಮಿಕ ಬಡಾಕೆರೆ ಶಾಲೆ ದತ್ತು ಸ್ವೀಕಾರ
ಕುಂದಾಪುರ:ಆಧುನಿಕ ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣ ದೊರೆತರೆ ಮಾತ್ರ ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾದ್ಯವಿದೆ ಎಂದು ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದ ಪೀಠಂ ಶೃಂಗೇರಿ ವೇ.ಮೂ ಲೋಕೇಶ್ ಅಡಿಗ ನಾಗ ಪಾತ್ರಿಗಳು ಬಡಾಕೆರೆ ಹೇಳಿದರು.
ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಬಡಾಕೆರೆ ಶಾಲೆಯಲ್ಲಿ ನಡೆದ ಶಾಲೆ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಕಾಲಘಟ್ಟಕ್ಕೆ ಸರಿ ಹೊಂದುವಂತಹ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕಾದ ಅಗತ್ಯತೆ ಇದೆ.ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.ಸರಕಾರಿ ಶಾಲೆಯನ್ನು ಸರ್ವತೊಮುಖವಾಗಿ ಅಭಿವೃದ್ಧಿಗೊಳಿಸಲು ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡಲಾಗುದು ಎಂದು ಹೇಳಿದರು.
ವೇ.ಮೂ ಲಕ್ಷ್ಮೀಶ ಅಡಿಗ ಅವರು ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಮಾತನಾಡಿ,ಊರಿನವರು ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕೆಂದು ಕೇಳಿಕೊಂಡರು.
ಬೈಂದೂರು ವಲಯದ ಬಿ.ಒ ನಾಗೇಶ ನಾಯ್ಕ್ ದಾನಿಗಳಿಗೆ ಕರಾರು ಪತ್ರವನ್ನು ಹಸ್ತಾಂತರಿಸಿ ಮಾತನಾಡಿ,ಬೈಂದೂರು ವಲಯದಲ್ಲಿ ಒಂದು ತಿಂಗಳ ಅವಧಿ ಒಳಗೆ ಮೂರು ಸರಕಾರಿ ಶಾಲೆಗಳನ್ನು ದಾನಿಗಳು ದತ್ತು ಸ್ವೀಕಾರ ಮಾಡಿದ್ದಾರೆ.ಇದೊಂದು ಐತಿಹಾಸಿಕ ಕ್ಷಣ,ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ದಿನಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಶ್ರೀಧರ ದೇವಾಡಿಗ ಮತ್ತು ಉಪಾಧ್ಯಕ್ಷೆ ಸರೋಜ ಶೆಟ್ಟಿ ಹಾಗೂ ಸದಸ್ಯರು,ಇಸಿಒ ಸತ್ಯನಾ ಕೊಡೇರಿ,ವೇ.ಮೂ ನಾಗೇಂದ್ರ ಅಡಿಗ,ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗಿರೀಶ್ ಶೇಟ್,ಗ್ರಾಮಸ್ಥರು,ಶಿಕ್ಷಕವೃಂದವರು ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ರೋಹಿಣಿ ಸ್ವಾಗತಿಸಿದರು.ಸಹ ಶಿಕ್ಷಕಿ ರಶ್ಮಿ ವಂದಿಸಿದರು.5 ವರ್ಷಗಳ ಅವಧಿಗೆ ಬಡಾಕೆರೆ ಶಾಲೆಯನ್ನು ದತ್ತು ಸ್ವೀಕಾರ ಮಾಡಲಾಗಿದೆ.
ವರದಿ ಜಗದೀಶ ದೇವಾಡಿಗ
ನಮ್ಮ ಜಾಲತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ- 9916284048