ನದಿಯಲ್ಲಿ ಈಜಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು
ಕುಂದಾಪುರ:ಬೆಳ್ವೆ ಸಮೀಪದ ಗೊಮ್ಮೋಲ್
ಚರ್ಚ್ ಹಿಂಭಾಗದಿಂದ
ಒಳ್ಳೆ ಹೊಂಡ ಕಜ್ಕೆ ಸಂತೆಕಟ್ಟೆ ಸಂಪರ್ಕದ ಒಳ್ಳೆ ಹೊಂಡ ಬಳಿ
ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಮಧ್ಯಾಹ್ನದ ಸಮಯ ಈಜಲು ಹೋದ ಗುಮೊಲ ನಿವಾಸಿ ಜಯಂತ ನಾಯ್ಕ್ ಹಾಗೂ ಬೆಳ್ವೆ ಶ್ರೀಶ ಆಚಾರ್ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ದಾರುಣ ಘಟನೆ ಭಾನುವಾರ ನಡೆದಿದೆ.
ಯುವಕರಿಬ್ಬರ ಮೃತ ದೇಹವನ್ನು ಮೇಲಕ್ಕೆ ಎತ್ತಲಾಗಿದೆ.
ಕಳೆದ ವಾರ ಮಂಗಳೂರು ಜಿಲ್ಲೆಯಲ್ಲಿ ಮೂವರೂ ಯುವಕರು ನದಿಗೆ ಈಜಲು ಹೋಗಿ ಅಣೆಕಟ್ಟು ಬಳಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.ಅವಿಭಜಿತ ದ.ಕ ಜಿಲ್ಲೆಯಲ್ಲಿ ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ಪೋಷಕರಲ್ಲಿ ಆತಂಕ ತಂದೊಡ್ಡಿದೆ.