ಗಂಗೊಳ್ಳಿ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ
ಕುಂದಾಪುರ:ಸೇವಾ ಕಾರ್ಯಗಳ ಮೂಲಕ ರೊಟರಿ ಕ್ಲಬ್ ಗಂಗೊಳ್ಳಿ ಉತ್ತಮವಾದ ಕೆಲಸಗಳನ್ನು ಮಾಡುತ್ತಿದೆ ಎಂದು ರೋಟರಿ ಜಿಲ್ಲೆ 3182 ವಲಯ 1ರ ಅಸಿಸ್ಟೆಂಟ್ ಗವರ್ನರ್ ಡಾ.ಸಂದೀಪ ಶೆಟ್ಟಿ ಹೇಳಿದರು.
ಗಂಗೊಳ್ಳಿ ಸ.ವಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಗಂಗೊಳ್ಳಿ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಂಗೊಳ್ಳಿ ರೋಟರಿ ಕ್ಲಬ್ನ ನೂತನ ಅಧ್ಯಕ್ಷ ಎಂ.ನಾಗೇಂದ್ರ ಪೈ ಅವರಿಗೆ ನಿರ್ಗಮಿತ ಅಧ್ಯಕ್ಷೆ ಸುಗುಣ ಆರ್.ಕೆ. ಮತ್ತು ನೂತನ ಕಾರ್ಯದರ್ಶಿ ಕೃಷ್ಣ ಪೂಜಾರಿ ಅವರಿಗೆ ನಿರ್ಗಮಿತ ಕಾರ್ಯದರ್ಶಿ ಚಂದ್ರಕಲಾ ಅಧಿಕಾರ ಹಸ್ತಾಂತರಿಸಿದರು.ಗಂಗೊಳ್ಳಿ ರೋಟರಿ ಕ್ಲಬ್ಬಿನ ಪತ್ರಿಕೆ ಗಂಗಾ,ವಲಯ ಸೇನಾನಿ ಪ್ರದೀಪ ಯಡಿಯಾಳ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ಮತ್ತು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಕುಂದಾಪುರ ಬಿ.ಬಿ.ಹೆಗ್ಡೆ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಚೇತನ ಶೆಟ್ಟಿ ಕೊವಾಡಿ ಉಪಸ್ಥಿತರಿದ್ದರು.ಸುಗುಣ ಆರ್.ಕೆ. ಸ್ವಾಗತಿಸಿದರು.ಕೆ.ರಾಮನಾಥ ನಾಯಕ್ ನಿರ್ವಹಿಸಿದರು.ಕೃಷ್ಣ ಪೂಜಾರಿ ವಂದಿಸಿದರು.























































































































































































































































































































































































































































































































































































































































































































































































































































































































































































































































































































































































































































































































































































































































































