ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಉದಯ ಜೋಗಿ ಹೃದಯಘಾತದಿಂದ ನಿಧನ

ಕುಂದಾಪುರ:ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ತಾಲೂಕಿನ ಕಟ್ಬೇಲ್ತೂರು ನಿವಾಸಿಯಾಗಿರುವ ಬೈಂದೂರಿನ ಉದಯ ಕುಮಾರ್ ಜೋಗಿ (ಐಎಫ್ಎಸ್) ಅವರು ಸಿಮ್ಲಾಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ತೀವೃತರಹದ ಹೃದಯಾಘಾತಕ್ಕೆ ಒಳಗಾಗಿ ಶನಿವಾರ ನಿಧನರಾಗಿದ್ದಾರೆ.
ಮೃತದೇಹ ಸೋಮವಾರ ಹುಟ್ಟೂರು ತಲುಪಲಿದೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.ಅವರಿಗೆ ಪತ್ನಿ ಸಹಿತ ಇಬ್ಬರು ಪುತ್ರರು ಇದ್ದಾರೆ.ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುವ ಉದಯ ಜೋಗಿ ಅವರ ಅಕಾಲಿಕ ಸಾವಿನಿಂದ ಬಹಳಷ್ಟು ದುಖಃವನ್ನುಂಟು ಮಾಡಿದೆ ಎಂದು ಕೆಸಿಡಿಸಿ ಸಿಬ್ಬಂದಿಗಳು ತಮ್ಮ ನೋವವನ್ನು ಹಂಚಿಕೊ0ಡಿದ್ದಾರೆ.































































































































































































































































































































































































































































































































































































































































































































































































































































































































































































































































































































































































































































































































































































































































































