ಸಂಪರ್ಕ ರಸ್ತೆ,ಚರಂಡಿ ದುರಸ್ತಿಗೊಳಿಸುವಂತೆ ಗಂಗೊಳ್ಳಿಯಲ್ಲಿ ಮೌನ ಪ್ರತಿಭಟನೆ
ಕುಂದಾಪುರ:ತಾಲೂಕಿನ ಗಂಗೊಳ್ಳಿ ಪಂಜುರ್ಲಿ ದೇವಸ್ಥಾನದ ಬಳಿ ಹಾದು ಹೋಗಿರುವ ತೆರೆದ ಬೃಹತ್ ಚರಂಡಿಯನ್ನು ದುರಸ್ಥಿಗೊಳಿಸುವಂತೆ ಹಾಗೂ ಪಂಜುರ್ಲಿ ದೇವಸ್ಥಾನಕ್ಕೆ ದಾರಿ ಕಲ್ಪಿಸುವಂತೆ ಆಗ್ರಹಿಸಿ ಗಂಗೊಳ್ಳಿ ಕಳುವಿನಬಾಗಿಲು ಚರಂಡಿ ಬಳಿ ಸ್ಥಳೀಯರು ಮತ್ತು ಮಕ್ಕಳು ಪೋಸ್ಟರ್ ಹಿಡಿದು ಬೃಹತ್ ಪ್ರತಿಭಟನೆಯನ್ನು ಭಾನುವಾರ ನಡೆಸಿದರು.
ಗಂಗೊಳ್ಳಿ ಗ್ರಾಮದ ದೊಡ್ಡಹಿತ್ಲು ಪಂಜುರ್ಲಿ ದೇವಸ್ಥಾನದ ಬಳಿ ಹಾದುಹೋಗಿರುವ ತೆರೆದ ಚರಂಡಿ ಕಲುಷಿತ ಕಪ್ಪು ನೀರಿನೊಂದಿಗೆ ಹರಿಯುತ್ತಿದೆ.ತೋಡಿನಲ್ಲಿ ಹರಿಯುವ ತ್ಯಾಜ್ಯ ದುರ್ನಾತ ಬೀರುತ್ತಿದೆ.ಸಾಂಕ್ರಮಿಕ ರೋಗ ಹರಡುವ ಭೀತಿ ಇದೆ.ಸೊಳ್ಳೆ ಕಡಿತದಿಂದ ಮಕ್ಕಳು ಸಂಕಟ ಪಡುತ್ತಿದ್ದಾರೆ.ಚರ್ಮ ರೋಗ ಸೇರಿದಂತೆ ಶುದ್ಧ ಗಾಳಿ ಕೊರತೆಯಿಂದ ಮಕ್ಕಳಿಗೆ ಹಾಗೂ ಹಿರಿಯರಿಗೆ ಉಸಿರಾಟ ಮಾಡಲು ಸಮಸ್ಯೆ ಆಗುತ್ತಿದೆ ಎಂದು ದೂರಿರುವ ನಾಗರಿಕರು ಚರಂಡಿ ದುರಸ್ತಿಗಾಗಿ ಹೋರಾಟವನ್ನು ಕೈಗೊಂಡಿದ್ದಾರೆ.ಪಂಜುರ್ಲಿ ದೇವಸ್ಥಾನಕ್ಕೆ ಸಂಪರ್ಕ ರಸ್ತೆ ಕಲ್ಪಿಸಬೇಕ್ಕೆನ್ನುವುದು ಸ್ಥಳೀಯರ ಆಗ್ರಹವಾಗಿದ್ದು ಬಿಡುಗಡೆ ಆಗಿರುವ ಅನುದಾನವನ್ನು ಬಳಸಿಕೊಂಡು ಚರಂಡಿ ಅಭಿವೃದ್ಧಿ ಕಾರ್ಯ ಸಹಿತ,ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕ್ಕೆನ್ನುವುದು ಗಂಗೊಳ್ಳಿ ಗ್ರಾಮದ ಜನರ ಬಹು ಕಾಲದ ಬೇಡಿಕೆ ಆಗಿದೆ.ಸಮರ್ಪಕ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ದೊರಕದೆ ಇದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗುದೆಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ:ಚರಂಡಿ ಅಭಿವೃದ್ಧಿ ಹಾಗೂ ಗಂಗೊಳ್ಳಿ ಪಂಜುರ್ಲಿ ದೇವಸ್ಥಾನಕ್ಕೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಸ್ಥಳೀಯರು ಕೈಗೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ,ದಾಖಲೆಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ಬಿಡುಗಡೆ ಆಗಿರುವ ಅನುದಾನದಿಂದ ಕಾಮಗಾರಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆಯನ್ನು ನೀಡಿದರು.ತಮ್ಮ ಬೇಡಿಕೆಗಳ ಕುರಿತು ಗ್ರಾಮಸ್ಥರು ತಹಶೀಲ್ದಾರ್‍ಗೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಗಂಗೊಳ್ಳಿ ಪಂಚಾಯಿತಿ ಪಿಡಿಒ ಉಮಾಶಂಕರ,ಸ್ಥಳೀಯರಾದ ನವಿನ ಗಂಗೊಳ್ಳಿ,ಯಶವಂತ ಗಂಗೊಳ್ಳಿ,ಸ್ಥಳೀಯರು ಉಪಸ್ಥಿತರಿದ್ದರು.ಗಂಗೊಳ್ಳಿ ಪೆÇಲೀಸ್ ಠಾಣೆಯಿಂದ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಪೋಸ್ಟರ್ ಅಭಿಯಾನ:ರಸ್ತೆ ಸಂಪರ್ಕ ವ್ಯವಸ್ಥೆ ಹಾಗೂ ಚರಂಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಕಳೆದ ಒಂದು ವಾರದ ಸಾರ್ವಜನಿಕರು ಪೆÇೀಸ್ಟರ್ ಅಭಿಯಾನವನ್ನು ಕೈಗೊಂಡಿದ್ದರು.ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೇರಿರುವುದು ವಿಶೇಷವಾಗಿತ್ತು.