ಹಳ್ಳದಂತಾದ ರಾಷ್ಟ್ರೀಯ ಹೆದ್ದಾರಿ:ವಾಹನ ಸವಾರರಿಗೆ ಸಂಕಷ್ಟ
ಮಂಗಳೂರು:ನಿರಂತರವಾಗಿ ಸುರಿದ ಭಾರಿ ಮಳೆಗೆ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಕೆಳಗಿನ ಪೇಟೆಯ ರಸ್ತೆಯಲ್ಲಿ ಮಳೆ ನೀರು ಎರಡು ಅಡಿಯಷ್ಟು ಹರಿದು ರಸ್ತೆ ತೋಡಿನಂತಾಗಿದೆ.ರಸ್ತೆಯಲ್ಲಿ ಮೊಣಕಾಲು ಗಂಟಿನಷ್ಟು ನೀರು ತುಂಬಿ ಕೊಂಡಿದ್ದರಿಂದ ವಾಹನ ಸವಾರರು ಭಾರಿ ಸಮಸ್ಯೆ ಎದುರಿಸಿದರು.ಕಳೆದ ತಿಂಗಳು ಕೂಡ ಇಲ್ಲಿ ಇದೇ ಸ್ಥಿತಿ ನಿರ್ಮಾಣವಾಗಿ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅರೆ ಬರೆ ಕಾಮಗಾರಿ ನಿರ್ವಹಿಸಲಾಗಿತ್ತು.ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ,ಗಿಡಗಂಟಿಗಳನ್ನು ತೆರವು ಮಾಡದೆ ಇರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.