ಸತ್ಯನಾರಾಯಣ ಪೂಜೆ,ನೂತನ ಕ್ಯಾಲೆಂಡರ್ ಬಿಡುಗಡೆ


ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ ಕಛೇರಿಯಲ್ಲಿ ಸತ್ಯನಾರಾಯಣ ಪೂಜೆ,ಲಕ್ಷ್ಮೀ ಪೂಜೆ ಹಾಗೂ 2025ನೇ ಸಾಲಿನ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಡೆಯಿತು.
ವೇದ ಮೂರ್ತಿ ನರಸಿಂಹ ಅಡಿಗ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.ಸಂಘದ ಅಧ್ಯಕ್ಷೆ ಸವಿತಾ ಖಾರ್ವಿ,ಉಪಾಧ್ಯಕ್ಷೆ ಪೂರ್ಣಿಮಾ ಮೊಗವೀರ,ನಿರ್ದೇಶಕರಾದ ಶೈಲಾ ಖಾರ್ವಿ ಮರವಂತೆ,ಸೀತಾ ಖಾರ್ವಿ,ಸುಜಾತ ಪೂಜಾರಿ ನಾವುಂದ,ಗಿರಿಜಾ ಖಾರ್ವಿ,ಆಶಾ ಉಳ್ಳೂರು,ಮುಕಾಂಬು ಖಾರ್ವಿ ಬಡಾಕೆರೆ,ನಬೀಸಾ ನಾವುಂದ,ಲೆಕ್ಕಿಗ ರೇಖಾ ಖಾರ್ವಿ,ಸಿಬ್ಬಂದಿಗಳಾದ ಚೈತ್ರಾ ಆಚಾರ್ಯ ಉಳ್ಳೂರು,ಹರ್ಷ ಖಾರ್ವಿ ಮರವಂತೆ ಉಪಸ್ಥಿತರಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ,ವಂದಿಸಿದರು.