ಮೆಕೋಡು ಶೇಡಕುಳಿ ಕೆರೆ ದಂಡೆ ಕುಸಿದು ಅಡಿಕೆ ತೋಟಕ್ಕೆ ಹಾನಿ



ಕುಂದಾಪುರ:ಭಾರಿ ಮಳೆಗೆ ಬೈಂದೂರು ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಮೇಲ್ಭಾಗದಲ್ಲಿರುವ ಶೇಡಕುಳಿ ಕೆರೆ ದಂಡೆ ಕುಸಿದು ಹೋಗಿದ್ದ ಘಟನೆ ಮಂಗಳವಾರ ನಡೆದಿದೆ.
ಕೆರೆ ದಂಡೆ ಕುಸಿದು ಹೋಗಿದ್ದರ ಪರಿಣಾಮ ಕೆರೆ ಕೇಳ ಭಾಗದಲ್ಲಿರುವ ಪ್ರವೀಣ್ ಚಂದ್ರಶೆಟ್ಟಿ ಅವರ ತೋಟಕ್ಕೆ ನೀರಿನೊಂದಿಗೆ ಮಣ್ಣು ನುಗ್ಗಿ ನೂರಾರು ಅಡಿಕೆ ಗಿಡ ಸಹಿತ ಬಾಳೆ ನಾಶವಾಗಿದೆ.ಘಟನೆಯಲ್ಲಿ ಲಕ್ಷಾಂತರ.ರೂ ನಷ್ಟ ಉಂಟಾಗಿದೆ.ಮೆಕೋಡು ದೇವಸ್ಥಾನದ ಅನ್ನ ಛತ್ರದ ಒಳಗೆ ಕೆರೆ ನೀರು ನುಗ್ಗಿದ್ದರಿಂದ ಕೇಸರು ಮಯವಾಗಿದ್ದು ಕಟ್ಟಡದೊಳಗೆ ಇದ್ದ ಅಮೂಲ್ಯವಾದ ಸ್ವತ್ತುಗಳಿಗೆ ಹಾನಿ ಉಂಟಾಗಿದೆ.
ಕೃಷಿಕ ಪ್ರವೀಣ್ ಚಂದ್ರ ಶೆಟ್ಟಿ ಮಾತನಾಡಿ,ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಮೆಕೋಡು ಪುರಾತನ ಕೆರೆ ದಂಡೆ ಕುಸಿದು ಹೋಗಿದೆ.ಕೆರೆ ನೀರು ಮತ್ತು ಮಣ್ಣು ತೋಟಕ್ಕೆ ನುಗ್ಗಿದ್ದರಿಂದ ನೂರಾರು ಅಡಿಕೆ ಸಸಿಗಳು,ಬಾಳೆ ಗಿಡ ನಾಶವಾಗಿದ್ದು ಲಕ್ಷಾಂತರ ನಷ್ಟ ಉಂಟಾಗಿದೆ.ಸರಕಾರ ಪರಿಹಾರವನ್ನು ನಿಡಬೇಕು ಎಂದರು.
ಮೆಕೋಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮರ್ಶಿಗಳಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಭಾರಿ ಮಳೆಗೆ ಕೆರೆ ದಂಡೆ ಕುಸಿತಗೊಂಡಿದ್ದು ದೇವಸ್ಥಾನದಲ್ಲಿನ ಅನ್ನ ಛತ್ರಕ್ಕೆ ನೀರು ನುಗ್ಗಿ ಸಾಕಷ್ಟು ಹಾನಿ ಉಂಟಾಗಿದೆ ಎಂದು ಹೇಳಿದರು.