ನಾಗೂರು:ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ನೂತನ ಮಳಿಗೆ ಉದ್ಘಾಟನೆ

Share

Advertisement
Advertisement

( ವಿಶ್ವ ಕ್ರಿಕೆಟಿಗಪ್ರಥ್ವಿರಾಜ್ ಶೆಟ್ಟಿ ಹುಂಚನಿ ಉದ್ಘಾಟಿಸಿದರು)

Advertisement

ಬೈಂದೂರು:ನಾಗೂರು ಬಸ್ ಸ್ಟ್ಯಾಂಡ್ ಬಳಿ ಕೃಷ್ಣ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ
ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು.ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗಣಹೋಮವನ್ನು ನೆರವೇರಿಸಲಾಯಿತು.

ವಿಶ್ವ ಕ್ರಿಕೆಟಿಗಪ್ರಥ್ವಿರಾಜ್ ಶೆಟ್ಟಿ ಹುಂಚನಿ ಉದ್ಘಾಟಿಸಿ ಶುಭಹಾರೈಸಿದರು.

ಜಯಪ್ರಕಾಶ್ ಶೆಟ್ಟಿ ಮಾತನಾಡಿ,ಗ್ರಾಮೀಣ ಪ್ರದೇಶದ ಯುವಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ಅನ್ನು ಸ್ಥಾಪನೆ ಮಾಡಲಾಗಿದೆ.ಕ್ರೀಡೆಗೆ ಪೂರಕವಾಗಿರುವಂತಹ ಎಲ್ಲಾ ರೀತಿಯ ವಸ್ತುಗಳು ಇಲ್ಲಿ ದೊರೆಯುತ್ತದೆ ಇದರ ಪ್ರಯೋಜನವನ್ನು ಸಂಘ, ಸಂಸ್ಥೆಗಳು,ಕ್ರಿಕೆಟ್ ತಂಡದ ಸದಸ್ಯರು,ಕಾರ್ಯಕ್ರಮದ ಆಯೋಜಕರು ಪಡೆದು ಕೊಳ್ಳಬೇಕು ಎಂದು ಕೇಳಿಕೊಂಡರು.
ಕಂಬದಕೋಣೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಕೇಶ್ ಶೆಟ್ಟಿ ಮಾತನಾಡಿ,ಹತ್ತು ವರ್ಷಗಳ ಹಿಂದೆ ಸನ್ ರೈಸ್ ಸ್ಪೋರ್ಟ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ಆ ನೆಲೆಯಲ್ಲಿ ಉತ್ಸಾಹಿ ಯುವಕರು ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ಎನ್ನುವ ನೂತನ ಸಂಸ್ಥೆಯನ್ನು ನಾಗೂರಿನಲ್ಲಿ ಸ್ಥಾಪನೆಮಾಡಿದ್ದಾರೆ.ಈ ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಗೆ ಸಂಬಂಧಿಸಿದ ಎಲ್ಲಾ ಬಗೆಯ ಕ್ರೀಡಾ ಪರಿಕರಗಳು ದೊರೆಯುತ್ತದೆ ಇದರ ಪ್ರಯೋಜನವನ್ನು ಪಡೆಯಬೇಕು ಎಂದು ಹೇಳಿದರು.

ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಖಾರ್ವಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಸ್ಪೋರ್ಟ್ಸ್ ಗ್ಯಾಲರಿ ಆರಂಭಿಸಿದ್ದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಯೋಜನೆ ಆಗಲಿದೆ ಎಂದರು.
ಸನ್ ರೈಸ್ ಸ್ಪೋರ್ಟ್ ಗ್ಯಾಲರಿ ಸಂಸ್ಥೆಯ ಮಾಲೀಕರಾದ ಪ್ರತಾಪ್ ಶೆಟ್ಟಿ ಹಳಗೇರಿ ಮಾತನಾಡಿ,ಕ್ರಿಕೆಟ್ ಗೆ ಸಂಬಂಧಿಸಿದ ಸಾಮಾಗ್ರಿಗಳು,ಶಟಲ್ ಬ್ಯಾಟ್, ವಾಲಿಬಾಲ್, ಸ್ಪೋರ್ಟ್ಸ್ ಗೆ ಸಂಬಂಧಿಸಿದ ಜರ್ಸಿ, ಸನ್ಮಾನ ಮತ್ತು ಮೊಮೇಂಟ್ ಗಳು ದೊರೆಯುತ್ತದೆ ನಮ್ಮ ನವ ಉದ್ಯಮಕ್ಕೆ ಎಲ್ಲಾ ಸಹಕರಿಸಬೇಕು ಎಂದು ಕ್ರೀಡಾಭಿಮಾನಿಗಳಲ್ಲಿ ವಿನಂತಿಸಿ ಕೊಂಡರು.ಈ ಸಂದರ್ಭ ಸನ್ ರೈಸ್ ಸ್ಪೋರ್ಟ್ಸ್ ಗ್ಯಾಲರಿ ಸಹ ಮಾಲೀಕರಾದ ಪ್ರತಾಪ್ ಸುಧಾಕರ ಶೆಟ್ಟಿ,ನೂರಿ ಅಶ್ರಫ್, ಸನ್ ರೈಸ್ ಸ್ಪೋರ್ಟ್ಸ್ ತಂಡದ ಸದಸ್ಯರು, ಕ್ರೀಡಾಭಿಮಾನಿಗಳು, ಸ್ಥಳೀಯರು,ಆಟೋ ಚಾಲಕ ಮತ್ತು ಮಾಲೀಕರ ಸಂಘದವರು ಉಪಸ್ಥಿತರಿದ್ದರು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page