ನಾಡ:ಎಸ್ ಪಿ ಪಾರ್ಕ್ ನೂತನ ವಾಣಿಜ್ಯ ಸಂಕೀರ್ಣ ಉದ್ಘಾಟನೆ
ಕುಂದಾಪುರ:ಸಕಲ ಸೌಲಭ್ಯಗಳೊಂದಿಗೆ
ನಾಡಗುಡ್ಡೆಯಂಗಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಎಸ್ ಪಿ ಪಾರ್ಕ್ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಕಟ್ಟಡದ ಉದ್ಘಾಟನೆಯ ಕಾರ್ಯಕ್ರಮದ ಪ್ರಯುಕ್ತ ಪುರೋಹಿತರ ಮಾರ್ಗದರ್ಶನದಲ್ಲಿ ಸುದರ್ಶನ ಹೋಮ,ವಾಸ್ತು ಪೂಜೆ, ಗಣಹೋಮ,ಸತ್ಯನಾರಾಯಣ ಪೂಜೆ ಜರುಗಿತು.
ಮಾಹಾರಾಜ ಸ್ವಾಮಿ ಮರವಂತೆ ದೇವಸ್ಥಾನ ಆಡಳಿತ ಮೊಕ್ತೇಸರರಾದ ಸತೀಶ್ ಎಂ ನಾಯಕ್ ಮಾತನಾಡಿ,ನಾಡ ಗುಡ್ಡೆಯಂಗಡಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ
ಎಸ್ ಪಿ ಪಾರ್ಕ್ ನಲ್ಲಿ ಎಲ್ಲಾ ರೀತಿಯ ಮಳಿಗೆಗಳು ಕಾರ್ಯಾಚರಣೆ ಮಾಡುತ್ತಿರುವುದರಿಂದ ಒಂದೇ ಸೂರಿನಡಿ ಸಕಲ ಸೌಲಭ್ಯಗಳು ಸಿಗಲಿದೆ.ಗ್ರಾಮೀಣ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣಗಳು,ಸಣ್ಣ ಸಣ್ಣ ಕೈಗಾರಿಕೆಗಳು ನಿರ್ಮಾಣ ವಾಗುವುದ ರಿಂದ ಗ್ರಾಮೀಣಾಭಿವೃದ್ಧಿ ಆಗುವುದರ ಜೊತೆಗೆ ಸ್ಥಳೀಯವಾಗಿ ಜನರಿಗೆ ಸೌಲಭ್ಯಗಳು ಸಿಗಲು ಸಹಕಾರಿ ಆಗುತ್ತದೆ ಎಂದು ಹೇಳಿದರು.ಎಸ್ ಪಿ ಪಾರ್ಕ್ ವಾಣಿಜ್ಯ ಸಂಕೀರ್ಣದ ಮಾಲೀಕರಾದ ವಿಜಯ ಕುಮಾರ್ ಶೆಟ್ಟಿ ಮತ್ತು ದಂಪತಿಗಳ ಮಕ್ಕಳಾದ ಶ್ರುತಿ ಮತ್ತು ಪುನೀತ್ ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭ ಎಸ್ ಪಿ ಪಾರ್ಕ್ ಮಾಲೀಕರಾದ ವಿಜಯಕುಮಾರ್ ಶೆಟ್ಟಿ,ಚಂದ್ರಾವತಿ ಶೆಟ್ಟಿ ಬಡಾಕೆರೆ,ದಿನೇಶ್ ಶೆಟ್ಟಿ,ಕರುಣಾಕರ ಶೆಟ್ಟಿ,ಸಂಜು ಶೆಟ್ಟಿ ವಕ್ಕೇರಿ,ಅನಿಲ್ ಶೆಟ್ಟಿ ವಕ್ಕೇರಿ,ಅನುಜಾ ಶೆಟ್ಟಿ ವಕ್ಕೇರಿ, ಹರೀಶ್ ಶೆಟ್ಟಿ ವಕ್ಕೇರಿ, ಕರುಣಾಕರ ಶೆಟ್ಟಿ ವಕ್ಕೇರಿ, ಶರತ್ ಕುಮಾರ್ ಶೆಟ್ಟಿ ಆಲೂರು,ವಿಶ್ವನಾಥ ಶೆಟ್ಟಿ ಮತ್ತು ಅವರ ಸ್ನೇಹಿತರು ಉಪಸ್ಥಿತರಿದ್ದರು.