ಡೋಲು ಬಾರಿಸುವ ಮೂಲಕ ಸಂವಿಧಾನ ಜಾಥಾ ಉದ್ಘಾಟಿಸಿದ ಶಾಸಕರು
ಬೈಂದೂರು:ಸಂವಿಧಾನದ ಮಹತ್ವವನ್ನು ಅರಿತುಕೊಂಡಾಗ ಮಾತ್ರ ಮೇಲು ಕೀಳು ಎಂಬ ಭೇದ ಭಾವವನ್ನು ಹೋಗಲಾಡಿಸಲು ಸಾಧ್ಯವಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಬೈಂದೂರು ತಾಲೂಕಿನ ಮರವಂತೆ ಗ್ರಾಮ ಪಂಚಾಯತ್‍ನಲ್ಲಿ ನಡೆದ ಸಂವಿಧಾನ ಜಾಥಾ ಕಾರ್ಯಕ್ರಮಕ್ಕೆ ಡೋಲು ಬಾರಿಸುವುದರ ಮುಖೇನ ಉದ್ಘಾಟಿಸಿ ಮಾತನಾಡಿದರು.
ಮರವಂತೆ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಖಾರ್ವಿ ಮತ್ತು ಸದಸ್ಯರು,ಬೈಂದೂರು ತಾಲೂಕು ಇಒ ಭಾರತಿ ಮತ್ತು ತಹಶೀಲ್ದಾರ್,ಆಶಾ ಮತ್ತು ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರು,ಗ್ರಾಮಸ್ಥರು,ವಿದ್ಯಾರ್ಥಿಗಳು,ಶಿಕ್ಷಕರು ಉಪಸ್ಥಿತರಿದ್ದರು.ಅಂಬೇಡ್ಕರ್ ಮತ್ತು ಗಾಂಧಿ ಪುತ್ಥಳಿಗೆ ಪೂಷ್ಪಾರ್ಚನೆ ಸಲ್ಲಿಸಲಾಯಿತು.