ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು,ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ

Share

Advertisement
Advertisement

ಕುಂದಾಪುರ:ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಕುಂದಾಪುರ ತಾಲೂಕು ಮಟ್ಟದ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಸರಸ್ಪತಿ ವಿದ್ಯಾಲಯ ಸಿದ್ದಾಪುರದಲ್ಲಿ ನಡೆಯಿತು.ತಾಲೂಕು ಮಟ್ಟದ ಕ್ರೀಡಾಕೂಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದ
ಯಡಾಡಿ- ಮತ್ಯಾಡಿ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ 17 ರ ವಯೋಮಾನದ ಒಳಗಿನ ವಿದ್ಯಾರ್ಥಿಗಳಾದ ಯತೀಶ್ ಶೆಟ್ಟಿ ಗುಂಡು ಎಸೆತದಲ್ಲಿ ಪ್ರಥಮ, ಸನ್ವಿತ್ ಪಿ. ಶೆಟ್ಟಿ 110 ಮಿ. ಹರ್ಡಲ್ಸ್ ನಲ್ಲಿ ಪ್ರಥಮ ,ಸಿರಿಕಾ ಗುಂಡು ಎಸೆತ ದ್ವಿತೀಯ ಮತ್ತು ಪ್ರಧಾನ್ ಹೆಗ್ಡೆ 200 ಮಿ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.17ರ ವಯೋಮಾನದ ಒಳಗಿನ 800 ಮಿ. ಓಟದ ಸ್ಪರ್ಧೆಯಲ್ಲಿ ಪ್ರಣೀತ್ ತೃತೀಯ ಸ್ಥಾನ ಮತ್ತು ಇಶಾನ್, ಪ್ರಣೀತ್, ಸನ್ಮಿತ್ ಪಿ ಶೆಟ್ಟಿ,ಪ್ರಧಾನ್ ಹೆಗ್ಡೆಯನ್ನು ಒಳಗೊಂಡ ರೀಲೇ ತಂಡವು ದ್ವಿತೀಯ ಸ್ಥಾನ ಗಳಿಸಿತು. ಹಾಗೂ ಪ್ರಾಥಮಿಕ ವಿಭಾಗದಲ್ಲಿ ರೋಶನ್ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದು ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.

Advertisement

ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಯುತ ಸತೀಶ್ ಕುಮಾರ್ ಹಾಗೂ ಸೂರ್ಯ ಅವರು ಮಾರ್ಗದರ್ಶನ ನೀಡಿದ್ದರು.ಅವರನ್ನು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಯುತ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಶ್ರೀಯುತ ಪ್ರತಾಪ್ ಚಂದ್ರ ಶೆಟ್ಟಿ , ಖಜಾಂಚಿಯಾದ ಶ್ರೀಯುತ ಭರತ್ ಶೆಟ್ಟಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಅಗಸ್ಟಿನ್ ಕೆ.ಎ. ಅವರು
ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಿದ್ದಾರೆ. ಶಾಲೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page