ಶ್ರೀಶಾರದಾ ಸದ್ವಿದ್ಯಾ ವಸಂತ ಶಿಬಿರ ಉದ್ಘಾಟನೆ

Share

ಕುಂದಾಪುರ:ಮಕ್ಕಳಿಗೆ ಸಂಸ್ಕಾರವನ್ನು ಕೊಡದೆ ಕೇವಲ ಜ್ಞಾನವನ್ನು ಮಾತ್ರ ನೀಡಿದರೆ ಪ್ರಯೋಜನ ಶೂನ್ಯವಾಗಿದೆ.ವಿದ್ಯೆ ಜತೆಗೆ ಸಂಸ್ಕಾರ ನೀಡಿದಾಗ ಮಾತ್ರ ಧರ್ಮ ಉಳಿಯುತ್ತದೆ.ಮೇಕಾಲೆ ಶಿಕ್ಷಣ ಪದ್ದತಿಯಿಂದ ಇಂದು ಮಕ್ಕಳು ಸರ್ಟಿಫಿಕೇಟ್ ಶಿಕ್ಷಣವನ್ನು ಪಡೆಯಲು ಮಾತ್ರ ಸಾಧ್ಯವಾಗುತ್ತಿದೆ ಎಂದು ಹಾಲಾಡಿ ಪಂಚಾಂಗಕರ್ತರು ವಿದ್ವಾನ್ ವಾಸುದೇವ ಜೋಯಿಸರು ತಟ್ಟುವಟ್ಟು ಹೇಳಿದರು.
ಬೈಂದೂರು ತಾಲೂಕಿನ ನಾವುಂದ ಬಡಾಕರೆ ಧಾರ್ಮಿಕ ಮಂದಿರದಲ್ಲಿ ಗುರುವಾರ ನಡೆದ ಶ್ರೀ ಶಾರದಾ ಸದ್ವಿದ್ಯಾ ಶಿಬಿರ ವಸಂತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದ ಪೀಠಂ ಶೃಂಗೇರಿ ವೇದ ಮೂರ್ತಿ ಲೋಕೇಶ್ ಅಡಿಗ ಮಾತನಾಡಿ,ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಂದು ಜೀವಿಗೂ ವಿದ್ಯೆ ಎನ್ನುವುದು ಬೇಕೆ ಬೇಕು.ವಿದ್ಯೆಯ ಜತೆಗೆ ಧಾರ್ಮಿಕ ಶಿಕ್ಷಣ ಸಿಕ್ಕಾಗ ಶ್ರೇಷ್ಠ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿ ಆಗುತ್ತದೆ ಎಂದರು.ತಪ್ಪನ್ನು ಅರಿತು ತಿದ್ದಿಕೊಳ್ಳುವುದೆ ನಮ್ಮನ್ನು ನಾವು ಶುದ್ಧಿ ಮಾಡಿಕೊಳ್ಳಲು ಇರುವ ಮಾರ್ಗವಾಗಿದೆ.ಜೀವನದಲ್ಲಿ ಹಣ ಮುಖ್ಯವಲ್ಲ ಸಮಾಜದಲ್ಲಿ ಜನರಿಗೆ ಒಳಿತನ್ನು ಮಾಡುವ ನಿಟ್ಟಿನಲ್ಲಿ ನಾವು ತೊಡಗಿಸಿಕೊಂಡಾಗ ಮಾತ್ರ ಸಾರ್ಥಕತೆಯಿಂದ ಜೀವನವನ್ನು ಕಾಣಬಹುದು ಎಂದು ಹೇಳಿದರು.
ಮಾಧವ ಅಡಿಗ ಬಡಾಕೆರೆ ಅಧ್ಯಕ್ಷತೆ ವಹಿಸಿದ್ದರು.ನಾಗಯಕ್ಷೀ ಪಾತ್ರಿಗಳಾದ ರಾಜೇಶ್ ಹೆಬ್ಬಾರ್,ಪ್ರಥಮ ದರ್ಜೆ ಗುತ್ತಿಗೆದಾರ ರಾಜೇಶ್ ಕಾರಂತ್ ಉಪ್ಪಿನಕುದ್ರು,ನಿವೃತ್ತ ಮಹಾಪ್ರಬಂಧಕರು ಕರ್ನಾಟಕ ಬ್ಯಾಂಕ್ ಯರ್ಲಪಾಡಿ ನಾಗರಾಜ ರಾವ್ ಬೈಕಾಡಿ,ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಡಾ.ರಾಜೇಶ್ ಬಾಯರಿ ಕಳಿ ಆಲೂರು, ವೇದಮೂರ್ತಿ ನಾಗೇಂದ್ರ ಅಡಿಗ,ಮಂಜುನಾಥ ಅಡಿಗ,ಪ್ರಕಾಶ್ ಅಡಿಗ,ಜರ್ನಾದನ ಅಡಿಗ ಉಪಸ್ಥಿತರಿದ್ದರು.ವೇದ ಮೂರ್ತಿ ಸೀತಾರಾಮ ಆಡಿಗ,ವೇದ ಮೂರ್ತಿ ನಾಗೇಶ್ ಭಟ್ಟ್ ದೇವಲ್ಕುಂದ,ವಿಶ್ರಾಂತ ಅಧ್ಯಾಪಕರು ಮಾಧವ ಮಂಜರು ಅರೆಹೊಳೆ ಅವರನ್ನು ಸಮ್ಮಾನಿಸಲಾಯಿತು.ವೇದ ಮೂರ್ತಿ ನಾಗೇಂದ್ರ ಹೆಬ್ಬಾರ್ ಬವಲಾಡಿ,ಉರಗ ತಜ್ಞ ಸುಧೀಂದ್ರ ಐತಾಳ್ ಸಾಲಿಗ್ರಾಮ,ಕವಿಗಳಾದ ಮಂಜುನಾಥ ಮರವಂತೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ವೆಂಕಟೇಶ್ ಮೂರ್ತಿ,ಶ್ರೀಪತಿ ಭಟ್ ಅವರನ್ನು ಅಭಿನಂದಿಸಲಾಯಿತು.ವೇದ ಮೂರ್ತಿ ಲಕ್ಷ್ಮೀಶ ಅಡಿಗ ಸ್ವಾಗತಿಸಿದರು.ನಾಗರತ್ನ ಲಕ್ಷ್ಮೀಶ ಅಡಿಗ ಪ್ರಾರ್ಥಿಸಿದರು.ದಾಮೋದರ ಶರ್ಮಾ ನಿರೂಪಿಸಿದರು.ಮಹೇಶ್ ಹೆಗ್ಡೆ ವಂದಿಸಿದರು.ವಸಂತ ಶಿಬಿರ 21 ದಿನಗಳ ಕಾಲ ನಡೆಯಲಿದೆ.

Advertisement

Share

Leave a comment

Your email address will not be published. Required fields are marked *

You cannot copy content of this page