ಶ್ರೀಗಣೇಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಾಮಾನ್ಯ ಸಭೆನಿವ್ವಳ ಲಾಭಾ:7.19 ಲಕ್ಷ.ರೂ,ಶೇ.10 ಡಿವಿಡೆಂಡ್ ಘೋಷಣೆ

Share

ಹೊಸಾಡು:ಶ್ರೀ ಗಣೇಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಳ್ಳಿಕಟ್ಟೆ-ಹೊಸಾಡು ಅದರ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಹೊಸಾಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸರ್ವ ಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಮುರಳೀಧರ್ ಐತಾಳ್ ಅವರು ಮಾತನಾಡಿ,ಸ್ವಚ್ಛ ಭಾರತ ಪರಿಕಲ್ಪನೆಯಡಿಯಲ್ಲಿ ಸ್ವಚ್ಛತಾ ಹಾಗೂ ಆರೋಗ್ಯ ಮಾಹಿತಿ ಶಿಬಿರವನ್ನು ಆಯೋಜನೆ ಮಾಡುವ ಕುರಿತು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು.ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗಾಗಿ,ಅಶಕ್ತರಿಗೆ ನೆರವು ವಿತರಣೆ ಮತ್ತು ವಿದ್ಯಾರ್ಥಿಗಳನ್ನು ಪ್ರೆÇೀತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದೆ.ನಿರ್ದೇಶಕರ ಮಂಡಳಿ ಮತ್ತು ಸದಸ್ಯರ ಸಹಕಾರ ದಿಂದ ಸಂಘವೂ ಆಡಿಟ್‍ನಲ್ಲಿ ಎ ಗ್ರೇಡ್ ಪಡೆದುಕೊಂಡಿದೆ.ಪ್ರಸ್ತುತ ಸಾಲಿನ ವರ್ಷದಲ್ಲಿ ಸಂಘವೂ 7.19 ಲಕ್ಷ.ರೂ ನಿವ್ವಳ ಲಾಭ ಗಳಿಸಿದ್ದು.ಲಾಭಾಂಶದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾವುದು ಎಂದು ಹೇಳಿದರು.
ಜ್ಯೋತಿ ಐತಾಳ್ ಅವರು ಹಿಂದಿನ ಸಾಲಿನ ವರದಿ ಮಂಡಿಸಿ ಒಪ್ಪಿಗೆ ಪಡೆದರು.ಸಿಇಒ ಅಶ್ವಿನಿ 2023-24ನೇ ಸಾಲಿನ ಆಯವ್ಯಯ ಹಾಗೂ ಆಡಳಿತ ವರದಿಯನ್ನು ವಾಚಿಸಿದರು.ಸಂಘದ ನಿರ್ದೇಶಕ ಶಾಂತರಾಮ ಭಟ್ಟ ನಿವ್ವಳ ಲಾಭದ ಹಂಚಿಕೆ ವರದಿಯನ್ನು ಮಂಡಿಸಿದರು.ನಿರ್ದೇಶಕ ಅಶೋಕ ಖಾರ್ವಿ ಅವರು ಮುಂದಿನ ಸಾಲಿನ ಕಾರ್ಯ ಯೋಜನೆಗಳ ಕುರಿತು ವರದಿ ಮಂಡಿಸಿ ಒಪ್ಪಿಗೆ ಪಡೆದುಕೊಂಡರು.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಕೃಷಿಕರಾದ ಶ್ರೀ ಕೃಷ್ಣ ಕಾರಂತ,ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ ಫರ್ನಾಂಡಿಸ್,ಉತ್ತಮ ಗ್ರಾಹಕರಾದ ರಾಘವೇಂದ್ರ ಶೆಟ್ಟಿ,ಅಶೋಕ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.ಸಂಘದ ಉಪಾಧ್ಯಕ್ಷ ರವೀಶ ಹೊಳ್ಳ ಮತ್ತು ಎಲ್ಲಾ ನಿರ್ದೇಶಕರು,ಸದಸ್ಯರು,ಸಲಹೆಗಾರರಾದ ವಿಶ್ವಂಭರ ಐತಾಳ್,ಡಿ.ಎಂ ಕಾರಂತ ಉಪಸ್ಥಿತರಿದ್ದರು.ನಿರ್ದೇಶಕ ಮಂಜುನಾಥ ಸ್ವಾಗತಿಸಿದರು.ಸಂಧ್ಯಾ ಕಾರಂತ ನಿರೂಪಿಸಿದರು.ಲೆಕ್ಕಿಗ ಶ್ರೀಕರ ಐತಾಳ್,ಸರೇಶ್ ಖಾರ್ವಿ ಸಹಕರಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page