ಅ.8 ರಿಂದ ಕೊಡಪಾಡಿ ಶ್ರೀ ಗುಹೇಶ್ವರ ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆ
ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀಗುಹೇಶ್ವರ ದೇವಾಲಯದ ಜೀರ್ಣೊದ್ಧಾರ ಪ್ರಯುಕ್ತ ಹಮ್ಮಿಕೊಂಡಿದ್ದ ಅಷ್ಟಮಂಗಳ ಪ್ರಶ್ನೆ ಚಿಂತನಾ ಕಾರ್ಯಕ್ರಮ ಅ.7,8,9 ರಂದು ನಡೆಯುವುದೆಂದು ನಿಶ್ಚಯಿಸಲಾಗಿತ್ತು.ಅನಿವಾರ್ಯ ಕಾರಣದಿಂದ ಅಷ್ಟಮಂಗಳ ಪ್ರಶ್ನೆ ಕಾರ್ಯಕ್ರಮ ಅ.8,9 ಮತ್ತು 10 ರಂದು ಕೇರಳದ ಪ್ರಸಿದ್ಧ ದೈವಜ್ಞರಾದ ನಾರಾಯಣ ನಂಬೂದಿರಿ ಕೈಮುಕ್ಕು ಹಾಗೂ ಇತರ ದೈವಜ್ಞರ ಸಹಕಾರದಲ್ಲಿ ನಡೆಯಲಿದೆ ದೇವಾಲಯದ ಸಮಿತಿ ತಿಳಿಸಿದೆ.