ಪತ್ನಿ ಛಾಯಾ ಪ್ರತಿಕೃತಿ ಜತೆ ಪತಿ 25ರ ಮದುವೆ ಸಂಭ್ರಮಾಚರಣೆ
ಕುಂದಾಪುರ:ಒಂದು ತಿಂಗಳ ಹಿಂದೆ ಅಕಾಲಿಕವಾಗಿ ನಿಧನರಾಗಿದ್ದ ಪತ್ನಿ ಸವಿ ನೆನಪಿನೊಂದಿಗೆ ಪತಿ 25 ರ ಸಂಭ್ರಮವನ್ನು ಆಚರಿಸಿಕೊಂಡು ಮಧುರ ದಾಂಪತ್ಯದ ಪ್ರೇಮದ ಪರಿಯನ್ನು ಜಗತ್ತಿಗೆ ಸಾರಿದ್ದಾರೆ.
ಕುಂದಾಪುರ ಸಪ್ತಗಿರಿ ಕೋ-ಅಪರೇಟಿವ್ ಸೊಸೈಟಿ ಸಂಸ್ಥಾಪಕ ಸದ್ಗುರು ಚಂದ್ರಶೇಖರ್ ಅವರು ಇಂತಹದ್ದೊಂದು ಸವಿನಯ ಸಂಪ್ರದಾಯಕ್ಕೆ ಮುನ್ನುಡಿ ಬರೆದವರು.ವಿವಾಹ ಮಹೋತ್ಸವದ ಬೆಳ್ಳಿಹಬ್ಬ ಆಚರಣೆ ಹೀಗೆ ಇರಬೇಕು ಎನ್ನುವ ಪತ್ನಿ ಸುಮಾ ಅವರ ಅಭಿಲಾಷೆಯನ್ನು ಅವರ ಅನುಪಸ್ಥಿತಿಯಲ್ಲಿ ಪತಿ ಈಡೇರಿಕೆಮಾಡಿದ್ದಾರೆ.ಪತ್ನಿ ಸುಮಾ ಕಳೆದ ತಿಂಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು.
ಬಡಾಕೆರೆ ಲಕ್ಷ್ಮೀಜನಾರ್ದನ ಸಭಾಭವನದಲ್ಲಿ ಚಂದ್ರಶೇಖರ್ ಅವರು ಅಗಲಿದ ಪತ್ನಿ ಭಾವ ಚಿತ್ರದೊಂದಿಗೆ ತಮ್ಮ ದಾಂಪತ್ಯ ಜೀವನದ 25ರ ಸಂಭ್ರಮವನ್ನು ಆಚರಿಸಿಕೊಂಡಿದ್ದರು.ಮಕ್ಕಳಾದ ಅಭಿನೇಹಾ,ಅನಿಲೇಖಾ ತಂದೆಗೆ ಸಾಥ್ ನೀಡಿದ್ದರು.ಆದರ್ಶ ದಂಪತಿಗಳ ಆದರ್ಶ ಪ್ರೇಮ ಕಥೆ ಜಗತ್ತಿಗೆ ಮಾದರಿ ಆಗಿದೆ.

























































































































































































































































































































































































































































































































































































































































































































































































































































































































































































































































































































































































































































































































































































































































































