ಹೆಮ್ಮಾಡಿ:ಲಾರಿ ಮುಷ್ಕರ ನಾಲ್ಕನೇ ದಿನವೂ ಮುಂದುವರಿಕೆ
ಕುಂದಾಪುರ:ಲಾರಿ ಮತ್ತು ಟೆಂಪೆÇ ಮಾಲಕರು ಹಾಗೂ ಚಾಲಕರ ಸಂಘ ಬೈಂದೂರು ವಲಯದ ವತಿಯಿಂದ ಕೈಗೊಂಡಿದ್ದ ಕಟ್ಟಡ ಸಾಮಾಗ್ರಿ ಸಾಗಾಟದ ವಾಹನಗಳ ಅನಿರ್ದಿಷ್ಟವಾಧಿ ಮುಷ್ಕರ ಶನಿವಾರವೂ ಮುಂದುವರೆದಿದ್ದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ನಾನಾ ಬೇಡಿಕೆಗಳ ಈಡೇರಿಕೆಗಾಗಿ ಕೈಗೊಂಡಿದ್ದ ಮುಷ್ಕರದ ಅಂಗವಾಗಿ ಲಾರಿ ಮಾಲೀಕರು ಮತ್ತು ಚಾಲಕರು ತಮ್ಮ ವಾಹನಗಳನ್ನು ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಪ್ರತಿಭಟನೆಯನ್ನು ನಡೆಸುತ್ತಾ ಇದ್ದಾರೆ.