ಶ್ರೀ ಸ್ವಾಮಿಲಿಂಗ ಮರ್ಲುಚಿಕ್ಕು ಶೂಲದ ಹಾೈಗುಳಿ ಪರಿವಾರ ದೈವಗಳ ಸಿರಿ ಸಿಂಗಾರ ಕೋಲ,ವಾರ್ಷಿಕ ಮಹೋತ್ಸವ ಆಚರಣೆ
ಕುಂದಾಪುರ:ಹೊಸಾಡು ಗ್ರಾಮದ ಮಂಕಿ-ಒಳನಾಡು
ಶ್ರೀ ಸ್ವಾಮಿಲಿಂಗ ಮರ್ಲುಚಿಕ್ಕು ಶೂಲದ ಹಾೈಗುಳಿ ಹಾಗೂ ಸಪರಿವಾರ ದೇವರ ಸಿರಿ ಸಿಂಗಾರ ಕೋಲ ಮತ್ತು ವಾರ್ಷಿಕ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಶ್ರೀ ದೇವರ ಸಿರಿ ಸಿಂಗಾರ ಕೋಲ ಮತ್ತು ವಾರ್ಷಿಕ ಮಹೋತ್ಸವ ಅಂಗವಾಗಿ ಶ್ರೀ ಶ್ರೀ ನಾಗ ಪೂಜೆ,ಮಹಾ ಮಂಗಳಾರತಿ,ನೇಮೋತ್ಸವ, ಪ್ರಸಾದ ವಿತರಣೆ,ಅನ್ನದಾನ ಸೇವೆ ಜರುಗಿತು.
ದೇವಸ್ಥಾನದ ಮೊಕ್ತೇಸರರಾದ ಕೃಷ್ಣ ಚೆಂದನ್ ಮಾತನಾಡಿ,ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಕೋಲ ನೇಮೋತ್ಸವವನ್ನು ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಅರ್ಜಿಣ ಅವಸ್ಥೆಯಲ್ಲಿದ್ದ ದೈವಸ್ಥಾನವನ್ನು ಕಳೆದ ಆರು ವರ್ಷಗಳ ಹಿಂದೆ ಜೀರ್ಣೋದ್ಧಾರ ಕಾರ್ಯವನ್ನು ಮಾಡಲಾಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದೆ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ವಾಳ್ತೂರು ನಾಗರಾಜ ಪಾಣನರ ಮಾತನಾಡಿ,ದೇವರಾಧನೆ ಭೂತಾರಾಧನೆ,ನಾಗಾರಾಧನೆ ಎನ್ನುವುದು ಕರಾವಳಿ ಭಾಗದ ಜನರ ಜೀವನ ಕೊಂಡಿಯಾಗಿದೆ.ಅನಾದಿ ಕಾಲದಿಂದಲೂ ನಡೆದು ಕೊಂಡು ಬರುತ್ತಿರುವ ಕೋಲ ನೇಮೋತ್ಸ ಇರಲಿ ಇನ್ನಾವುದೇ ಆಚರಣೆ ಆಗಲಿ ಇನ್ನೂ ಚಾಲ್ತಿಯಲ್ಲಿರುವುದೇ ಇದಕ್ಕೆ ಸಾಕ್ಷಿಆಗಿದೆ ಎಂದು ಹೇಳಿದರು.
ಶ್ರೀ ಸ್ವಾಮಿಲಿಂಗ ಮರ್ಲುಚಿಕ್ಕು,ಶೂಲದ ಹಾೈಗುಳಿ,ಮುಡುರ ಹಾೈಗುಳಿ, ನಾಗಪಾದ ಹಾೈಗುಳಿ, ಜೈನ ಹಾೈಗುಳಿ,ಕೆಂಡ ಹಾೈಗುಳಿಸೇರಿದಂತೆ ಸಪರಿವಾರ ದೈವಗಳ ವಾರ್ಷಿಕ ಸಿರಿ ಸಿಂಗಾರ ಕೋಲ ಕಟ್ಟುಕಟಲೇ ಯಂತೆ ನಡೆಯಿತು.ಭಕ್ತರು ದೈವಗಳಿಗೆ ಹರಕೆಯನ್ನು ಸಲ್ಲಿಸಿದರು.ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರು, ಅರ್ಚಕ ವೃಂದ, ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಶ್ರೀ ನಾಗಬನ ,ಶ್ರೀ ಸ್ವಾಮಿಲಿಂಗ ಸಪರಿವಾರ ದೈವಸ್ಥಾನ ಸಮಿತಿ ಸರ್ವ ಸದಸ್ಯರು ,ಗ್ರಾಮಸ್ಥರು ಉಪಸ್ಥಿತರಿದ್ದರು