ಕೇಂದ್ರ ಸಮಿತಿ ಒಕ್ಕೂಟ ಪದಗ್ರಹಣ,ಅನುದಾನಗಳ ವಿತರಣಾ ಕಾರ್ಯಕ್ರಮ

Share

Advertisement
Advertisement

ಕುಂದಾಪುರ:ಕಷ್ಟದಲ್ಲಿರುವ ಜನರನ್ನು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮೇಲೆತ್ತುವ ಉದ್ದೇಶದಿಂದ ಆರಂಭಗೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಚರಿಸುತ್ತಿರುವುದರ ಜತೆಗೆ ಕೇರಳ ರಾಜ್ಯದ ಕಾಸರಗೋಡುನಲ್ಲಿಯೂ ಜನ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದು ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಅಪ್ಪಣ್ಣ ಹೆಗ್ಡೆ ಹೇಳಿದರು.

Advertisement

ಬೈಂದೂರು ತಾಲೂಕಿನ ನಾಗೂರು ಶ್ರೀಗೋಪಾಲಕೃಷ್ಣ ಸಭಾ ಭವನದಲ್ಲಿ ಶನಿವಾರ ನಡೆದ ಕೇಂದ್ರ ಸಮಿತಿ ಒಕ್ಕೂಟದ ಪದಗ್ರಹಣ ಮತ್ತು ವಿವಿಧ ಅನುದಾನಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರಿಗೆ ಸಹಾಯ ಸಹಕಾರ ಮಾಡುವುದರ ಮೂಲಕ ಜನರಿಗೆ ಬೇಕಾಗಿರುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ.ಕಾರ್ಯ ಚಟುವಟಿಕೆಯ ಯಶಸ್ಸಿನ ಹಾದಿಯನ್ನು ಗಮನಿಸಿದಾಗ ಸಂಸ್ಥೆಯ ಉದ್ದೇಶ ಸಫಲತೆ ಕಂಡಿದೆ ಎಂದು ಅಭಿಪ್ರಾಯಪಟ್ಟರು.

ಕರಾವಳಿ ಪ್ರಾದೇಶಿಕ ವಿಭಾಗ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೆ ಗೌಡ ಮಾತನಾಡಿ,ಆರ್ಥಿಕ ಶಕ್ತಿಯನ್ನು ನೀಡುವುದರ ಜತೆಗೆ ಸಮಾಜದ ಜನರಿಗೆ ನ್ಯಾಯವನ್ನು ದೊರಕಿಸಿ ಕೊಡುವಂತಹ ಕೆಲಸವನ್ನು ಯೋಜನೆಯಿಂದ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಕೇಂದ್ರ ಸಮಿತಿ ಪ್ರ.ಬ.ಸ್ವ.ಸ.ಸ ಒಕ್ಕೂಟ ಬೈಂದೂರು ತಾಲೂಕು ಅಧ್ಯಕ್ಷ ರಘುರಾಮ.ಕೆ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಜನಜಾಗೃತಿ ವೇದಿಕೆ ಬೈಂದೂರು ತಾಲೂಕ ಅಧ್ಯಕ್ಷ ಸುಧಾಕರ ಆಚಾರ್ಯ,ಕೇಂದ್ರ ಸಮಿತಿ ಒಕ್ಕೂಟ ಬೈಂದೂರು ತಾಲೂಕು ನೂತನ ಅಧ್ಯಕ್ಷ ವಾಸು ಮೇಸ್ತ,ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ,ಶ್ರೀಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ಅಧ್ಯಕ್ಷ ಚಂದ್ರ ಪೂಜಾರಿ,ಶೌರ್ಯ ವಿಪತ್ತು ನಿರ್ವಹಣಾ ಘಟಕ ಬೈಂದೂರು ಕ್ಯಾಪ್ಟನ್ ಪ್ರವೀಣ ಮೊವಾಡಿ,ಮಂಜುನಾಥ ಉಡುಪ ನಾಗೂರು,ಶಿವರಾಜ ಪೂಜಾರಿ,ರಾಮ ಮೇಸ್ತ,ಕೃಷ್ಣ ಪೂಜಾರಿ,ನಾರಾಯಣ ಕೆ ಗುಜ್ಜಾಡಿ ಹಾಗೂ ನಾನಾ ವಲಯಗಳ ನಿಕಟ ಪೂರ್ವ ಮತ್ತು ನೂತನ ಅಧ್ಯಕ್ಷರುಗಳು ಉಪಸ್ಥಿತರಿದ್ದರು.ಯೋಜನಾಧಿಕಾರಿ ವಿನಾಯಕ ಪೈ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಗೋಳಿಹೊಳೆ ಮೇಲ್ವಿಚಾರಕಿ ಸಂಗೀತಾ ನಿರೂಪಿಸಿದರು.ಕಿರಿಮಂಜೇಶ್ವರ ಮೇಲ್ವಿಚಾರಕ ರಾಘವೇಂದ್ರ ವಂದಿಸಿದರು.

ಏಳು ವಲಯಗಳ ನೂತನ ಅಧ್ಯಕ್ಷರಿಗೆ ಪದ ಪ್ರದಾನ ಮಾಡಲಾಯಿತು.ವಿಶೇಷ ಸಾಧನೆಗೈದ ಒಕ್ಕೂಟಗಳಿಗೆ ಅಭಿನಂದನೆ ಪತ್ರ ವಿತರಿಸಲಾಯಿತು.ನಾನಾ ಫಲಾನುಭವಿಗಳಿಗೆ ಅನುದಾನದ ಆದೇಶ ಪತ್ರ ನೀಡಲಾಯಿತು.ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.


ನೂತನ ವಲಯಾಧ್ಯಕ್ಷರಿಗೆ ಅಧಿಕಾರ ಹಸ್ತಾರ
ಉಪ್ಪುಂದ ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ,ಕಿರಿಮಂಜೇಶ್ವರ ವಲಯಾಧ್ಯಕ್ಷರಾಗಿ ಸುರೇಂದ್ರ ನಾಯ್ಕ್,ಗೋಳಿಹೊಳೆ ವಲಯಾಧ್ಯಕ್ಷರಾಗಿ ನಾರಾಯಣ ಗೌಡ,ತ್ರಾಸಿ ವಲಯಾಧ್ಯಕ್ಷರಾಗಿ ಪ್ರಮೀಳ,ಪಡುಕೋಣೆ ವಲಯಾಧ್ಯಕ್ಷರಾಗಿ ಚಂದ್ರ ಪೂಜಾರಿ ಹಾಗೂ ಕೊಲ್ಲೂರು ವಲಯಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page