ನಾವುಂದ:ಆಕಸ್ಮಿಕವಾಗಿ ಬೆಂಕಿ ತಗುಲಿ,ಫ್ಯಾನ್ಸಿ ಸ್ಟೋರ್ ಭಸ್ಮ
ಕುಂದಾಪುರ:ಬೈಂದೂರು ತಾಲೂಕಿನ ನಾವುಂದ ಜಂಕ್ಷನ್ ಪ್ಲಾಮ್ ಗ್ರೋ ಕಾಂಪ್ಲೆಕ್ಸ್ ನಲ್ಲಿರುವ ಪ್ರತೀಮಾ ಆಚಾರ್ಯ ಅವರಿಗೆ ಸಂಬಂಧಿಸಿದ ಫ್ಯಾನ್ಸಿ ಸ್ಟೋರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ.
ಪ್ರತಿಬಾ ಆಚಾರ್ಯ ಅವರು ಎಂದಿನಂತೆ ಬೆಳಿಗ್ಗೆ ಅಂಗಡಿ ಬಾಗಿಲು ತೆರೆದು ಕೆಲಸ ಮಾಡಿ ಬಳಿಕ ಅಂಗಡಿ ಬಾಗಿಲು ಮುಚ್ಚಿ ದೇವಸ್ಥಾನಕ್ಕೆ ತೆರಳಿದ್ದಾರೆ ಸುಮಾರು 12.30 ಸುಮಾರಿಗೆ ಅಂಗಡಿಗೆ ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದಿದೆ.ಬೆಂಕಿ ಹೊಡೆತಕ್ಕೆಅಂಗಡಿಯಲ್ಲಿನ ವಸ್ತು ನಾಶವಾಗಿದೆ.ಬೈಂದೂರು ಅಗ್ನಿ ಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.