ಕಂಚುಗೋಡು ಶ್ರೀರಾಮ ದೇವಸ್ಥಾನ ಸುವರ್ಣ ಮಹೋತ್ಸವ ಮಹಿಳಾ ಸಮಿತಿ ರಚನೆ
ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದ ಸುವರ್ಣ ಮಹೋತ್ಸವ ಮಹಿಳಾ ಸಮಿತಿ ರಚನಾ ಸಭೆ ಶ್ರೀರಾಮ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ನಡೆಯಿತು.
ಶ್ರೀರಾಮ ದೇವಸ್ಥಾನ ಕಂಚುಗೋಡು ಸಂಘಟನಾ ಕಾರ್ಯದರ್ಶಿ ರಾಘು ವಿ.ಕೆ ಮಾತನಾಡಿ,ಶ್ರೀರಾಮ ದೇವಸ್ಥಾನಕ್ಕೆ 50 ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ನೂತನ ಆಡಳಿತ ಸಮಿತಿ ಮತ್ತು ಮಹಿಳಾ ಸಮಿತಿಯನ್ನು ರಚನೆ ಮಾಡಲಾಗಿದೆ.ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ ನಾಗೇಶ್ ಖಾರ್ವಿ ಮತ್ತು ಕಾರ್ಯದರ್ಶಿಯಾಗಿ ಕೃಷ್ಣ ಪಟೇಲ್ ಅವರು ಈಗಾಗಲೇ ಆಯ್ಕೆಯಾಗಿದ್ದಾರೆ.ನೂತನವಾಗಿ ರಚನೆ ಗೊಂಡಿರುವ ಸುವರ್ಣ ಮಹೋತ್ಸವ ಮಹಿಳಾ ಸಮಿತಿ ಅಧ್ಯಕ್ಷರಾಗಿ ಯಶೋಧ ಖಾರ್ವಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು.ನೂತನ ಸಮಿತಿಗಳಿಂದ ಮುಂದಿನ ಕಾರ್ಯಯೋಜನೆ ನಡೆಯಲಿದೆ ಎಂದು ಹೇಳಿದರು.ಶ್ರೀರಾಮ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ನಾಗೇಶ್ ಖಾರ್ವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸುವರ್ಣ ಮಹೋತ್ಸವ ಮಹಿಳಾ ಸಮಿತಿ ಅಧ್ಯಕ್ಷರಾಗಿ ಯಶೋಧ ಖಾರ್ವಿ ಅವರನ್ನು ಆಯ್ಕೆಮಾಡಲಾಯಿತು.ಉಪಾಧ್ಯಕ್ಷರಾಗಿ ರಾಧ ಖಾರ್ವಿ,ಲಲಿತಾ ಖಾರ್ವಿ,ಪಲ್ಲವಿ,ಕಾರ್ಯದರ್ಶಿಯಾಗಿ ವಂದನಾ ಖಾರ್ವಿ,ಜೊತೆ ಕಾರ್ಯದರ್ಶಿ ವೀಣಾ ಖಾರ್ವಿ,ಸಂಘಟನಾ ಕಾರ್ಯದರ್ಶಿ ಆಶಾ ಹಾಗೂ ಖಜಾಂಚಿಯಾಗಿ ಜಯಂತಿ ಅವರನ್ನು ಆಯ್ಕೆಮಾಡಲಾಯಿತು.ದೇವಸ್ಥಾನದ ಆಡಳಿತ ಮಂಡಳಿ ಸಮಿತಿ ಕಾರ್ಯದರ್ಶಿ ಕೃಷ್ಣ ಪಟೇಲ್,ಕೋಶಾಧಿಕಾರಿ ವಾಸುದೇವ ಖಾರ್ವಿ,ಉಪಾಧ್ಯಕ್ಷರಾದ ರವಿ ಖಾರ್ವಿ,ಸುಬ್ರಹ್ಮಣ್ಯ ಪೂಜಾರಿ,ದೇವದಾಸ ಖಾರ್ವಿ,ಪ್ರಕಾಶ ಖಾರ್ವಿ ಹೊಸಪೇಟೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.