ನನಗೊಂದು ಅವಕಾಶ ನೀಡಿ-ಗೀತಾ ಶಿವರಾಜ್ ಕುಮಾರ್

Share

Advertisement
Advertisement

ಕುಂದಾಪುರ:ಸೇವಾ ಮನೋಭಾವದಿಂದ ಕೆಲಸ ಮಾಡುವ ಗೀತಾ ಶಿವರಾಜ್ ಕುಮಾರ್ ಅವರನ್ನು ಬೈಂದೂರು ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು.ಗೀತಕ್ಕ ಆ ವಿಶ್ವಾಸವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಗುರುವಾರ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ವಂಡ್ಸೆ ಮತ್ತು ಬ್ಲಾಕ್ ಕಾಂಗ್ರೆಸ್ ಬೈಂದೂರು ಇದರ ಕಾರ್ಯಕರ್ತರ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ ಕಾರ್ಯಕರ್ತರಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಮಾ.28 ರಿಂದ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಪ್ರತಿ ಪಂಚಾಯಿ ವ್ಯಾಪ್ತಿ ಪ್ರದೇಶಕ್ಕೆ ಭೇಟಿ ನೀಡಿ ಮತ ಯಾಚನೆ ಮಾಡಲಿದ್ದಾರೆ ಎಂದರು.
ಬಂದರು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಮತನಾಡಿ,ಕಟ್ಟಕಡೆಯ ಮೀನುಗಾರರ ಕಣ್ಣೀರನ್ನು ಒರೆಸುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ.ಬಿಜೆಪಿ ಪಕ್ಷದವರು ಲಾಭ ಇಲ್ಲದೆ ಯಾವುದೆ ರೀತಿ ಕೆಲಸವನ್ನು ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.ಜನರ ಬಗ್ಗೆ ಕಾಳಜಿಯನ್ನು ಹೊಂದಿರುವ ಬಂಗಾರಪ್ಪನವರ ಪುತ್ರಿಯನ್ನು ಗೆಲ್ಲಿಸಲು ಎಲ್ಲರೂ ಪ್ರಯತ್ನಸಬೇಕು ಎಂದು ಹೇಳಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಮಾತನಾಡಿ,ನಿಮ್ಮೆಲ್ಲರ ಧ್ವನಿಯಾಗಿ ನಾನು ನಿಲ್ಲುತ್ತೇನೆ ಜನಸೇವಾ ಕೆಲಸಗಳನ್ನು ಮಾಡಲು ನನಗೆ ಒಂದು ಅವಕಾಶ ನೀಡಬೇಕೆಂದು ಕೇಳಿಕೊಂಡರು.
ಕನ್ನಡ ಚಲನಚಿತ್ರ ನಟ ಶಿವರಾಜ್ ಕುಮಾರ್,ಶಾಸಕ ಬೆಳೂರು ಗೋಪಾಲಕೃಷ್ಣ,ಕಿಮ್ಮಾನೆ ರತ್ನಕಾರ,ಅಭಯಚಂದ್ರ ಜೈನ್,ಎಂಎಲ್‍ಸಿ ಮಂಜುನಾಥ ಭಂಡಾರಿ, ಹರೀಶ್ ಕುಮಾರ್,ಜಿ.ಎ.ಭಾವ,ಎಂ.ಎ ಗಫೂರ್,ಶಿರಸಿ ಶಾಸಕ ಭೀಮಾ ನಾಯ್ಕ್,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಬಿ.ಎಂ.ಸುಕುಮಾರ ಶೆಟ್ಟಿ,ರಾಜು.ಎಸ್ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ವಂದಿಸಿದರು.
ಸುದ್ದಿಗಳನ್ನು ನಮ್ಮ ಜಾಲಾತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ-9916284048

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page