ಸಮುದ್ರದಲ್ಲಿ ನಾಪತ್ತೆ ಆಗಿದ್ದ,ಸತೀಶ್ ಖಾರ್ವಿ ಶವ ಪತ್ತೆ

Share

ಕುಂದಾಪುರ:ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿ ಕಡಲ ತೀರದ ಬಳಿ ಸೋಮವಾರ ನಾಡದೋಣಿ ಮೂಲಕ ಮೀನುಗಾರಿಕೆ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಕಡಲ ಅಲೆಯ ಅಬ್ಬರಕ್ಕೆ ದೋಣಿ ಮಗುಚಿದ ಪರಿಣಾಮ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಸತೀಶ್ ಖಾರ್ವಿ (30) ಅವರ ಮೃತ ದೇಹ ಕೊಡೇರಿ ಬಂದರು ಸಿವಾಕ್ ಬಳಿ ಮಂಗಳವಾರ ರಾತ್ರಿ ಪತ್ತೆ ಆಗಿದೆ.
ನಾಡದೋಣಿ ಮೂಲಕ ಮೀನುಗಾರಿಕೆಯಲ್ಲಿ ತೊಡಗಿಕೊಂಡು ದಡಕ್ಕೆ ಮರಳಿ ಬರುತ್ತಿರುವ ಸಂದರ್ಭದಲ್ಲಿ ಅಲೆಯ ಹೊಡೆತಕ್ಕೆ ದೋಣಿ ಮಗುಚಿ ಬಿದ್ದದರಿಂದ ದೋಣಿಯಲ್ಲಿದ್ದ 7 ಜನರ ಮೀನುಗಾರರ ಪೈಕಿ 5 ಜನ ಮೀನುಗಾರರು ಈಜಿಕೊಂಡು ದಡ ಸೇರಿದ್ದರು.ನಾಗೇಶ್ (29) ಎಂಬುವವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಕೊಂಡು ಹೋಗಿದ್ದರು,ಪ್ರಯತ್ನ ಫಲಕಾರಿ ಆಗದೆ ಸಾವನ್ನಪ್ಪಿದ್ದರು.ಸತೀಶ್ ಅವರು ಸಮುದ್ರದಲ್ಲಿ ನಾಪತ್ತೆ ಆಗಿದ್ದರಿಂದ ಅವರಿಗಾಗಿ ಎರಡು ದಿನಗಳಿಂದ ಸತತವಾಗಿ ಹುಡುಕಾಟವನ್ನು ಮಾಡಲಾಗಿತ್ತು.ಮಂಗಳವಾರ ರಾತ್ರಿ ಕೊಡೇರಿ ಸಿವಾಕ್ ಬಳಿ ಶವವಾಗಿ ಪತ್ತೆ ಆಗಿದ್ದಾರೆ.

Advertisement

Share

Leave a comment

Your email address will not be published. Required fields are marked *

You cannot copy content of this page