ಪ್ರವಾಸದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕುಂದಾಪುರ:ಸ್ವಯಂ ಜಾಗೃತಿ ಬೆಂಗಳೂರು ತಂಡದ ವತಿಯಿಂದ ಪ್ರವಾಸದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಡಿ ಮರವಂತೆ-ತ್ರಾಸಿ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯವನ್ನು ಶನಿವಾರ ಮಾಡಲಾಯಿತು.
ಸ್ವಯಂ ಜಾಗೃತಿ ಬೆಂಗಳೂರು ತಂಡದ ಸದಸ್ಯರು ಮರವಂತೆ ಬೀಚ್‍ಗೆ ಭೇಟಿ ನೀಡಿ,ಕಡಲ ಕಿನಾರೆಯಲ್ಲಿ ಬಿದ್ದ ನಿರೂಪಕ್ತ ತ್ಯಾಜ್ಯ,ಪ್ಲಾಸ್ಟಿಕ್,ಗಾಜಿನ ಬಾಟಲಿಗಳನ್ನು ಹೆಕ್ಕಿ ವಿಲೇವಾರಿ ಮಾಡಿದರು.ಬಳಿಕ ಉಡುಪಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಬೀಚ್ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ತಂಡದ ಸದಸ್ಯರಾದ ಅಜಯ್ ಕುಮಾರ್,ಶರಣ್ ಪಾಟೀಲ್,ಭರತ್ ಆರ್,ಸೋಮಶೇಖರ್,ನಿಂಗರಾಜು,ಸಂತೋಷ್ ಹಿಂಬಾಳೆ,ಆಶಿಕ್ ಶೆಟ್ಟಿ,ಚರಣ್ ಗೌಡ,ಸುನಿಲ್,ಶ್ರೀಷ,ರೇಣುಕಾ ಪ್ರಸಾದ್ ಮತ್ತು ಮಂಜು ಕನ್ನಡಿಗ ಉಪಸ್ಥಿತರಿದ್ದರು.























































































































































































































































































































































































































































































































































































































































































































































































































































































































































































































































































































































































































































































































































































































































































