ಶಾಸಕರ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ:ದೂರು ದಾಖಲು

ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಯುವ ಮೋರ್ಚಾ ವತಿಯಿಂದ ಗಂಗೊಳ್ಳಿ ಠಾಣೆ ಪಿಎಸ್‍ಐ ಪವನ್ ನಾಯ್ಕ್ ಅವರಿಗೆ ಸೋಮವಾರ ದೂರನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವೀಂದ್ರ ಖಾರ್ವಿ ಹೊಸಪೇ ಟೆ,ಬೈಂದೂರು ಬಿಜೆಪಿ ಸಾಮಾಜಿಕ ಜಾಲಾತಾಣ ಸಂಚಾಲಕ ರಾಜೇಶ್ ರಾಮಣ್ಣ ನಾರ್ಕಳಿ,ಯುವ ಮೋರ್ಚಾ ಅಧ್ಯಕ್ಷ ಗಜೇಂದ್ರ ಎಸ್ ಬೆಲೆಮನೆ,ಉಪಾಧ್ಯಕ್ಷ ಚೇತನ್ ಮೊಗವೀರ,ಪ್ರದೀಪ್ ಉಪ್ಪÅಂದ,ಕಾರ್ಯದರ್ಶಿ ಜಯಂತ್ ಗಂಗೊಳ್ಳಿ ಉಪಸ್ಥಿತರಿದ್ದರು.
ಸುಕೇಶ ಬೆಂಗಳೂರು ಎನ್ನುವ ಹೆಸರಿನಲ್ಲಿ ಫೇಸ್ ಬುಕ್‍ನಲ್ಲಿ ಖಾತೆಯಲ್ಲಿ ಪೆÇೀಸ್ಟ್‍ಗಳು ಪ್ರಕಟವಾಗುತ್ತಿದ್ದು. ಶಾಸಕರ ಜನಪ್ರಿಯತೆ ಸಹಿಸದೆ ಯಾವುದೆ ಸಾಕ್ಷ್ಯಾಧಾರಗಳಿಲ್ಲದೆ ದುರುದ್ದೇಶದಿಂದ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಸಾಮಾಜಿಕ ಜಾಲಾತಾಣದಲ್ಲಿನ ನಕಲಿ ಖಾತೆಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ.ಶಾಸಕರ ವಿರುದ್ಧ ಅವಹೇಳನ ಮಾಡುತ್ತಿರುವವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ಬೈಂದೂರು ಯುವ ಮೋರ್ಚಾ ತಿಳಿಸಿದೆ.