ಭಾರಿ ಮಳೆಗೆ ಮನೆ ಗೋಡೆ ಕುಸಿತ:5 ಲಕ್ಷ.ರೂ ನಷ್ಟ

ಕುಂದಾಪುರ:ನಿರಂತರವಾಗಿ ಸುರಿದ ಭಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮುಂಜೆ ನರಸಿಂಹ ಆಚಾರ್ಯ ಅವರ ಮನೆ ಗೋಡೆ ಕುಸಿತ ಗೊಂಡು ಭಾಗಶಹ ಹಾನಿ ಉಂಟಾಗಿದೆ.ಅಂದಾಜು 5.ಲಕ್ಷ.ರೂ ನಷ್ಟ ಸಂಭವಿಸಿದ ಘಟನೆ ಬುಧವಾರ ನಡೆದಿದೆ.
ಕರಾವಳಿ ಭಾಗದಲ್ಲಿ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಧಾರಕಾರ ಮಳೆ ಗಾಳಿ ಅಬ್ಬರಕ್ಕೆ ಮನೆಗಳ ಮೇಲೆ ಮರ ಬಿದ್ದು ಹಾನಿ ಆಗಿದ್ದು ಮಾತ್ರವಲ್ಲದೆ.ಮನೆಗಳ ಗೋಡೆ ಕುಸಿತಗೊಂಡಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.