ತ್ರಾಸಿ:ಬೆಂಕಿ ತಗುಲಿ ಕಾರು ಭಸ್ಮ


ಕುಂದಾಪುರ:ತಾಲೂಕಿನ ತ್ರಾಸಿ ಸರ್ಕಲ್ ಬಳಿ ಪೆಟ್ರೋಲ್ ಬಂಕ್ ಎದುರುಗಡೆ ಆಕಸ್ಮಿಕವಾಗಿ ತಗುಲಿದ ಬೆಂಕಿ ಕೆನ್ನಾಲಿಗೆಗೆ ವಿನಾಯಕ ಗ್ಯಾರೇಜ್ ಬಳಿ ನಿಲ್ಲಿಸಿದ ಹಳೆ ಕಾರೊಂದು ಸುಟ್ಟು ಕರಕಲಾಗಿದ್ದ ಘಟನೆ ಭಾನುವಾರ ನಡೆದಿದೆ.
ಬೈಂದೂರು ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಬಂಕಿನಲ್ಲಿರುವ ಬೆಂಕಿ ನಿರೋಧಕ ಉಪಕರಣದ ಮೂಲಕ ಬೆಂಕಿಯನ್ನು ತಹಬದಿಗೆ ತರಲು ಪ್ರಾಥಮಿಕ ಹಂತದಲ್ಲಿ ಪ್ರಯತ್ನಿಸಿದ್ದರು.