ಹೊಸಾಡು:ವಿಶೇಷ ಚೇತನರ ಸ್ವ-ಸಾಹಯ ಸಂಘ ಉದ್ಘಾಟನೆ
ಕುಂದಾಪುರ:ಉಳಿತಾಯದ ಮನೋಭಾವವನ್ನು ಸೃಷ್ಟಿಸುವ ಸಲುವಾಗಿ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ವಿಶೇಷ ಚೇತನರ ಸ್ವಸಹಾಯ ಸಂಘಗಳನ್ನು ರಚನೆ ಮಾಡಿರುವುದು ಬಹಳಷ್ಟು ಉತ್ತಮವಾದ ಕೆಲಸವಾಗಿದೆ.ಮಾಸಿಕ ವೇತನವನ್ನು ಪಡೆದು ಕೊಳ್ಳುವ ವಿಶೇಷ ಚೇತನರರು ಕೂಡ ಒಂದಂಶ ಹಣವನ್ನು ಉಳಿತಾಯ ಮಾಡಲು ಸಹಕಾರಿ ಆಗಿದೆ ಎಂದು ಹೊಸಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾರ್ವತಿ ಹೇಳಿದರು.
ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ನಡೆದ ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ಆಶ್ರಯದಲ್ಲಿ ನೂತನವಾಗಿ ರಚನೆಗೊಂಡಿರುವ ಗುರು ರಾಘವೇಂದ್ರ,ಶ್ರೀ ರಾಘವೇಂದ್ರ ಹಾಗೂ ಮಹಾಕಾಳಮ್ಮ ಎಂಬ ಹೆಸರಿನ ವಿಶೇಷ ಚೇತನರ ಸಂಜೀವಿನಿ ಸ್ವಸಹಾಯ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂಜೀವಿನಿ ಸಂಘದ ಎಂಬಿಕೆ,ಎಲ್ಸಿಆರ್ಪಿ,ಕೃಷಿ ಉದ್ಯೋಗ ಸಖಿ,ಪಶು ಸಖಿ,ಕೃಷಿ ಸಖಿ,ವಿಆರ್ಡಬ್ಲ್ಯೂ,ಸಂಘದ ಉಪಸ್ಥಿತರಿದ್ದರು.































































































































































































































































































































































































































































































































































































































































































































































































































































































































































































































































































































































































































































































































































































































































































