ಶಾನ್ಕಟ್ಟು ಕೆಳಗಿನ ಮನೆಯಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ
ಅಂಪಾರು:ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಕೆಳಗಿನ ಮನೆ ಕುಟುಂಬಸ್ಥರ ಶ್ರಿ ಆದಿ ನಾಗ ದೇವರ ಸನ್ನಿಧಿಯಲ್ಲಿ ಏಕ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.ಗಣಪತಿ ಪೂಜೆ, ದರ್ಶನ ಸೇವೆ,ಮಹಾ ಅನ್ನಸಂತರ್ಪಣೆ ಜರಗಿತು ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಅನ್ನ ಪ್ರಸಾದವನ್ನು ಸ್ವೀಕರಿಸಿದರು.
ಶ್ರೀ ನಾಗದೇವರ ಏಕ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಹೊರೆ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ಗ್ರಾಮ ದೇವತೆ,ಅಡಿ ದೇವತೆಗಳಿಗೆ ಫಲ ಸಮರ್ಪಣೆ ಕಾರ್ಯಕ್ರಮ ನಡೆಯಿತು.ಆಶ್ಲೇಷಾ ಬಲಿ,ಮಂಡಲ ಮಂಟಪದಲ್ಲಿ ವಾಸ್ತು ರಾಕ್ಷೋಷ್ನ ಬಲಿ ಜರುಗಿತು.
ಶಾನ್ಕಟ್ಟು ಕೆಳಗಿನ ಮನೆ ರಾಘವೇಂದ್ರ ಶೆಟ್ಟಿ ಮಾತನಾಡಿ, ಕೆಳಗಿನ ಮನೆ ಕುಟುಂಬಸ್ಥರ ವತಿಯಿಂದ ಏಕ ಪವಿತ್ರ ನಾಗಮಂಡಲೋತ್ಸವ ವಿಜೃಂಭಣೆಯಿಂದ ನಡೆದಿದೆ ಎಂದು ಹೇಳಿದರು.ಸಂತಾನ ಕಾರಕನಾದ ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದಿದೆ ಎಂದು ಹೇಳಿದರು.
ದಿವಾಕರ ಶೆಟ್ಟಿ ಮಾತನಾಡಿ,108 ವರ್ಷಗಳ ಹಿಂದೆ ಸಂತಾನ ಪ್ರಾಪ್ತಿಗಾಗಿ ಹೇಳಿಕೊಂಡಿರುವ ನಾಗಮಂಡಲೋತ್ಸವ ಹರಕೆಯನ್ನು ಕುಟುಂಬಸ್ಥರ ಕೂಡುವಿಕೆಯಿಂದ ದೇವರಿಗೆ ಸಮರ್ಪಣೆ ಮಾಡಲಾಗಿದೆ ಎಂದರು.ಶ್ರೀ ನಾಗದೇವರು ಕುಟುಂಬಸ್ಥರಿಗೂ, ಗ್ರಾಮಸ್ಥರಿಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.
ಚಂದ್ರ ಜೋಗಿ ಶಾನ್ಕಟ್ಟು ಮಾತನಾಡಿ,
ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಹೊರೆ ಕಾಣಿಕೆ ಗ್ರಾಮಸ್ಥರ ಸಹಕಾರದಿಂದ ವಿಜೃಂಭಣೆಯಿಂದ ನಡೆದಿದೆ.ಮಹಾ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು ಎಂದರು.ಇವೊಂದು ದೇವತಾ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ಶಾನ್ಕಟ್ಟು ಕುಟುಂಬಸ್ಥರ ಪರವಾಗಿ ಧನ್ಯವಾದವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಶಾನ್ಕಟ್ಟು ಕುಟುಂಬಸ್ಥರು,ಗ್ರಾಮಸ್ಥರು ಉಪಸ್ಥಿತರಿದ್ದರು .