ಮರವಂತೆ:ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ
ಬೈಂದೂರು:ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶಗಳಲ್ಲಿ ವಿದ್ಯುತ್ ಬಳಕೆದಾರರ ಸಮಸ್ಯೆಗಳಿಗೆ ಹಗಲು,ರಾತ್ರಿ ಎನ್ನದೇ ಸ್ಪಂದಿಸಿ ಉತ್ತಮವಾದ ಸೇವೆಯನ್ನು ನೀಡುವುದರ ಜತಗೆ ಜನ ಪ್ರೀತಿ ಗಳಿಸಿರುವ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳಾದ ಲೈನ್‍ಮ್ಯಾನ್ ಮಂಜುನಾಥ ದೇವಾಡಿಗ ಮತ್ತು ಅಲಗೌಡ ಪಾಟೀಲ ಅವರನ್ನು ಸಾಧಾನಾ ಸಮುದಾಯ ವೇದಿಕೆ ಮರವಂತೆ ವತಿಯಿಂದ ಶನಿವಾರ ನಡೆದ ಸಂಘದ ಮಾಸಿಕ ಸಭೆಯಲ್ಲಿ ಸನ್ಮಾನಿಸಲಾಯಿತು.
ಸಾಧನಾ ಅಧ್ಯಕ್ಷ ಜೇಕ್ಸನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು,ನಾಗೇಶ್ ಎಸ್.ರಾವ್,ಕೋಶಾಧಿಕಾರಿ ಎಂ.ಸುಬ್ರಹ್ಮಣ್ಯ ಅವಭೃತ,ಕಾರ್ಯದರ್ಶಿ ಗಜೇಂದ್ರ ಖಾರ್ವಿ,ದೇವಿದಾಸ್ ಶ್ಯಾನುಭಾಗ್ ಉಪಸ್ಥಿತರಿದ್ದರು.



























































































































































































































































































































































































































































































































































































































































































































































































































































































































































































































































































































































































































































































































































































































































































