ಮರವಂತೆ:ನೆರಳು ಮನೆ ಹಸ್ತಾಂತರ

Share

ಕುಂದಾಪುರ:ಅಶಕ್ತರ ಬಾಳಿಗೆ ನೆರವಾಗುವ ದೃಷ್ಟಿಯಿಂದ ಸೂರನ್ನು ಕಟ್ಟಿಸಿಕೊಟ್ಟಿರುವುದು ಬಹಳಷ್ಟು ಉತ್ತಮವಾದ ಕೆಲಸವಾಗಿದೆ.ಮಾನವ ಜನಾಂಗ ಒಂದೆ ಎನ್ನುವ ಮನೋಭಾವದಿಂದ ಬಾಳಿದರೆ ಮಾತ್ರ ಸಮಾಜದಲ್ಲಿನ ಅಸಾಮತೋಲನವನ್ನು ಹೊಗಲಾಡಿಸಬಹುದು ಎಂದು ಪತ್ರಕರ್ತ ಅರುಣ್ ಕುಮಾರ್ ಶಿರೂರು ಹೇಳಿದರು.
ಬಾಂಧವ್ಯ ಫೌಂಡೇಶನ್ ನೆರಳು ಯೋಜನೆ ವತಿಯಿಂದ ಬೈಂದೂರು ತಾಲೂಕಿನ ಮರವಂತೆಯಲ್ಲಿ ನಿರ್ಮಿಸಿದ ನೆರಳು 11ನೇ ಮನೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಾಂಧವ್ಯ ಫೌಂಡೇಶನ್ ಸ್ಥಾಪಕಾಧ್ಯಕ್ಷ ದಿನೇಶ್ ಬಾಂಧವ್ಯ ಅವರು ಫಲಾನುಭವಿ ತುಂಗ ಪೂಜಾರಿ ಅವರಿಗೆ ಮನೆಯ ಕೀ ಹಸ್ತಾಂತರಿಸಿದರು.
ಝೀ ಕನ್ನಡ ಸರಿಗಮಪ ಚಾಂಪಿಯನ್ ಯಶವಂತ್ ಎಮ್.ಜಿ,ಉಡುಪಿ ಟೌನ್ ಆರಕ್ಷಕ ಠಾಣೆಯ ಜಯಕರ ಐರೋಡಿ,ಕಳಿಬೈಲು ಕೊರಗಜ್ಜ ದೇವಸ್ಥಾನದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ,ಆನಂದ ಯಾದವ ತಿಪಟೂರು,ನಾಗರಾಜ ಆಚಾರ್ಯ,ಜೀವರಕ್ಷಕ ದಳದ ಚೇತನ್,ನಾಗೇಶ ಪೂಜಾರಿ ಯಳಜಿತ್ ಉಪಸ್ಥಿತರಿದ್ದರು.ಅಮೃತ ಹಸ್ತ ತಂಡ ಬೆಂಗಳೂರು,ಕ್ಲೀನ್ ತ್ರಾಸಿ ತಂಡ ಮರವಂತೆ,ಟೀಮ್ ಕುಂದಾಪುರಿಯನ್ಸ್ ಹಾಗೂ ಝೀ ಕನ್ನಡ ಸರಿಗಮಪ ಚಾಂಪಿಯನ್ ಯಶವಂತ್ ಎಮ್.ಜಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ದಿನೇಶ ಬಾಂಧವ್ಯ ಸ್ವಾಗತಿಸಿ,ಪ್ರಾಸ್ತಾವಿಕ ಮಾತುಗಳನ್ನಾಡಿದರು.ಡಾ.ಜ್ಯೋತಿ ಸಾಮಂತ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page