ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಕುಂದಾಪುರ ಕನ್ನಡ ಸಂಭ್ರಮ
ಕುಂದಾಪುರ:ಜ್ಞಾನ,ಮೌಲ್ಯ,ಶಿಸ್ತು-ಸಂಯಮದಿಂದ ಕೂಡಿದ ಕುಂದಾಪುರ ಕನ್ನಡ ಭಾಷೆಯು ಜನಪದ ಸೊಗಡಿನಿಂದ ಕೂಡಿದೆ ಜನರ ಜೀವನವು ಕುಂದಗನ್ನಡದೊಂದಿಗೆ ಸಮ್ಮಿಲನ ಗೊಂಡಿದೆ.ಅಬ್ಬಿ ಭಾಷೆ ಮಾತಾಡುಕೆ ಚೆಂದ ಅದನ್ನು ಮರೆತ್ರೆ ನಾವು ನಮ್ಮನ್ನ ಮರೆತಂತೆ ಎಂದು ಪ್ರೋ.ಎಂ ಬಾಲಕೃಷ್ಣ ಶೆಟ್ಟಿ ಹೇಳಿದರು.ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಕುಂದಾಪ್ರ ದಿನಾಚರಣೆ ಕಾರ್ಯಕ್ರಮವನ್ನು ತಿರಿಗೆ ಭತ್ತವನ್ನು ತುಂಬುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.ಹಾದಿ ಮೇಲೆ ಹೋಪರ್ ಹಾಡೆಂದು ಕಾಣ್ಬೇಡಿ.. ಹಾಡಲ್ಲ ನನ್ನ ಒಡಲೂರಿ.. ಎ೦ದು ಭಾಷೆಯ ಸೊಗಸನ್ನು ಜನಪಾದ ಹಾಡಿನ ಮೂಲಕ ವರ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾತನಾಡಿ ಮಕ್ಕಳಿಗೆ ತಮ್ಮ ನೆಲದ ಸಂಸ್ಕೃತಿ ಮೌಲ್ಯ ಅರಿವಾಗಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಹಳ್ಳಿ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಮಕ್ಕಳ ಬದುಕಿಗೆ ಮಾರ್ಗದರ್ಶನವಾಗಬೇಕೆಂದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕುಂದಾಪುರ ಕನ್ನಡ ಕೆಂಬುಕ್ ಚೆಂದ,ಮಣ್ಣಿನ ಭಾಷೆಯನ್ನು ಬಳಸುದರ ಮೂಲಕ ಇನ್ನಷ್ಟು ಬೆಳೆಸಬೇಕು.ಭಾಷೆ ನಶಿಸಿ ಹೋದರೆ ಒಂದು ಸಂತತಿ ನಾಶವಾದಂತೆ ಎಂದು ಅಭಿಪ್ರಾಯಪಟ್ಟರು. ಶಾಲೆಯ ಮುಖ್ಯ ಶಿಕ್ಷಕರಾದ ಅಗಸ್ಟಿನ್ ಕೆ. ಎ ಉಪಸ್ಥಿತರಿದ್ದರು.ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.ವಿಶ್ವ ಕುಂದಾಪುರ ಕನ್ನಡ ದಿನದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಪರ್ಣಿಕ ಸ್ವಾಗತಿಸಿದರು ,ಶಾಧನ ದೇವಾಡಿಗ ನಿರೂಪಿಸಿದರು .ಪ್ರಾರ್ಥನ ವಂದಿಸಿದರು.