ಅನಾಹುತ ಅರಿವು ಕಾರ್ಯಾಗಾರ
ಕುಂದಾಪುರ:ತ್ರಾಸಿ-ಮರವಂತೆ ಬೀಚ್ನಲ್ಲಿ ಪೆÇಲೀಸ್ ಇಲಾಖೆ,ಬೀಚ್ ನಿರ್ವಹಣಾ ಸಮಿತಿ,ಕೆ.ಎನ್.ಡಿ ಸಿಬ್ಬಂದಿ ಮತ್ತು 24/7 ಹೆಲ್ಪ್ಲೈನ್ ಗಂಗೊಳ್ಳಿ ವತಿಯಿಂದ ಅನಾಹುತ ಅರಿವು ಕಾರ್ಯಾಗಾರ ನಡೆಯಿತು.
ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್ನ ರಮಣೀಯ ದೃಶ್ಯವನ್ನು ನೋಡ ಬರುತ್ತಿರುವ ಪ್ರವಾಸಿಗರಿಗೆ ಕಡಲು ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಕಡಲಿಗೆ ಇಳಿದು ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳದಂತೆ ಅರಿವನ್ನು ಮೂಡಿಸಲಾಯಿತು.ಅನಾಹುತ ಅರಿವು ಕಾರ್ಯಕ್ರಮದಡಿಯಲ್ಲಿ ಕಳೆದ ಒಂದು ವಾರಗಳಿಂದ ನಿರಂತರವಾಗಿ ಅಭಿಯಾನದ ಪ್ರಯುಕ್ತ ಪ್ರವಾಸಿಗರಿಗೆ ಕಡಲಿಗೆ ಇಳಿದು ಅನಾಹುತ ಹೇಗೆ ಸಂಭವಿಸುತ್ತದೆ ಎನ್ನುವ ವಿಚಾರದ ಬಗ್ಗೆ ಹಾಗೂ ಮುನ್ನೆಚ್ಚರಿಕೆಯನ್ನು ವಹಿಸುವ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತಿದೆ.ಪ್ರವಾಸಿಗರು ರಸ್ತೆ ಮೇಲೆ ನಿಂತು ಸಮುದ್ರದ ಸೌಂದರ್ಯ ನೋಡಿ ಖುಷಿಪಟ್ಟರು.