ಮುಳ್ಳಿಕಟ್ಟೆಯಲ್ಲಿ ಜಯಮಾಹಲ ವಾಣಿಜ್ಯ ಸಂಕೀರ್ಣ ಶೀಘೃದಲ್ಲೆ ಶುಭಾರಭ

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಹೊಸಾಡು ಶಾಲೆ ಸಮೀಪ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಯಶೋಧ ಜಗದೀಶ್ ಮೊಗವೀರ ಬಟ್ಟೆಕುದ್ರು ಅವರ ಮಾಲೀಕತ್ವದ ಜಯಮಾಹಲ ಕಛೇರಿ ಉದ್ಘಾಟನಾ ಕಾರ್ಯಕ್ರಮ ವಿಜಯದಶಮಿ ಶುಭ ಸಂದರ್ಭದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶನಿವಾರ ಮಾಡಲಾಯಿತು.ಈ ಸಂದರ್ಭದಲ್ಲಿ ಜಯಮಾಲ ವಾಣಿಜ್ಯ ಸಂಕೀರ್ಣದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
ಉದ್ಯಮ ಕ್ಷೇತ್ರದಲ್ಲಿ ಸುಮಾರು 38 ವರ್ಷಗಳ ಅನುಭವವನ್ನು ಹೊಂದಿರುವ ಯಶೋಧ ಜಗದೀಶ್ ಮೊಗವೀರ ಅವರು ತಮ್ಮ ಕಷ್ಟದ ದಿನಗಳ ನಡುವೆ ಬೆಂಗಳೂರಿಗೆ ಪಯಣಿಸಿ ಅಲ್ಲಿ ಜೀವನವನ್ನು ಕಟ್ಟಿಕೊಂಡು ಸ್ವಂತ ಉದ್ಯಮ ಮಾಡುವುದರ ರೊಂದಿಗೆ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ.
ತಮ್ಮ ಹೂಟ್ಟೂರಿನಲ್ಲಿ ಏನಾದರೂ ಉದ್ಯಮ ಮಾಡಬೇಕು,ಒಂದಿಷ್ಟು ಜನರಿಗೆ ಕೆಲಸವನ್ನು ನೀಡಬೇಕು ಎನ್ನುವ ಮಹತ್ವಾಕಾಂಕ್ಷೆ ಯೊಂದಿಗೆ ಮುಳ್ಳಿಕಟ್ಟೆ ಮುಖ್ಯ ರಸ್ತೆಯಲ್ಲಿ ಜಯಮಹಾಲ ಎನ್ನುವ ವಾಣಿಜ್ಯ ಸಂಕೀಣದ ನಿರ್ಮಾಣಕ್ಕೆ ಮುಂದುಡಿ ಇಟ್ಟಿದ್ದಾರೆ.ಕಟ್ಟಡದ ಕೆಲಸ ಭರದಿಂದ ಸಾಗುತ್ತಿದ್ದು ಈಗಾಗಲೇ ಮೂರು ಅಂತಸ್ತಿನ ಕಟ್ಟಡ ನಿರ್ಮಾಣದ ಹಂತದಲ್ಲಿ ಇದೆ.ಇನ್ನೂ ಒಂದು ವರ್ಷದ ಅವಧಿ ಒಳಗೆ ವಿನೂತನ ವಿನ್ಯಾಸದೊಂದಿಗೆ ಜಯಮಾಹಲ ವಾಣಿಜ್ಯ ಸಂಕೀರ್ಣ ತಲೆ ಎತ್ತಲಿದೆ.
ಜಯಮಾಹಲ ವಾಣಿಜ್ಯ ಸಂಕೀರ್ಣದಲ್ಲಿ ಉತ್ತಮ ದರ್ಜೆಯ ಮದುವೆ ಹಾಲ್ ಹಾಗೂ ಕಮರ್ಷಿಲ್ ಕಾಂಪ್ಲೆಕ್ಸ್ ನಿರ್ಮಾಣವಾಗಲಿದ್ದು,36 ಅಂಗಡಿ ಕೋಣೆಗಳು ಇರಲಿದೆ.ಮದುವೆ ಹಾಲ್ ಮುನ್ನೆಡುವವರು ಹಾಗೂ ಅಂಗಡಿ,ಆಫೀಸ್‍ಗಳನ್ನು ತೆರೆಯಲು ಸಂರ್ಪಕಿಸಬಹುದಾಗಿದೆ.
ಜಯಮಾಹಲ ವಾಣಿಜ್ಯ ಸಂಕೀರ್ಣದ ಮಾಲೀಕರಾದ ಜಯಗದೀಶ ಮೊಗವೀರ ಬಟ್ಟೆಕುದ್ರು ಅವರು ಮಾತನಾಡಿ,ಕಳೆದ 38 ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯಮವನ್ನು ಮಾಡಿಕೊಂಡು ಬರಲಾಗುತ್ತಿದ್ದು.ನಮ್ಮ ಊರಿನಲ್ಲಿ ಉದ್ಯಮ ಸ್ಥಾಪನೆ ಮಾಡಬೇಕು ಎನ್ನುವ ಉದ್ದೇಶದಿಂದ ಮುಳ್ಳಿಕಟ್ಟೆಯಲ್ಲಿ ಭವ್ಯವಾದ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ.ಮದುವೆ ಹಾಲ್ ಸಹಿತ,ಅಂಗಡಿ ಕೋಣೆ,ಆಫೀಸ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು.ಉದ್ಯಮವನ್ನು ಆರಂಭಿಸುವ ಉದ್ಯಮಿಗಳಿಗೆ ನಮ್ಮ ಕಟ್ಟಡವನ್ನು ಬಾಡಿಗೆಗೆ ನೀಡಲಾಗುತ್ತದೆ.ಆಸಕ್ತರು ಭೇಟಿ ನೀಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಯಶೋಧ ಜಗದೀಶ ಮೊಗವೀರ ಬಟ್ಟೆಕುದ್ರು,ಅವರ ಕುಟುಂಬಸ್ಥರು,ಸ್ನೇಹಿತರು,ಹಿತೈಷಿಗಳು ಉಪಸ್ಥಿತರಿದ್ದರು.
ಮದುವೆ ಹಾಲ್ ಮತ್ತು ಅಂಗಡಿ ಕೋಣೆಗಳನ್ನು ಬುಕಿಂಗ್ ಮಾಡುವವರು ಈ ನಂಬರನ್ನು ಸಂಪರ್ಕಿಸಬಹುದು-9448707849



























































































































































































































































































































































































































































































































































































































































































































































































































































































































































































































































































































































































































































































































































































































































































