ಉಪ್ಪುಂದ:ಮೀನುಗಾರ ಮಹಿಳೆಯರು ಪ್ರಾರಂಭಿಸಿದಕೋಸ್ಟಲ್ ಮಾರ್ಟ್ ಮಳಿಗೆ ಶುಭಾರಂಭ

Share

Advertisement
Advertisement

ಉಪ್ಪುಂದ:ಮನುವಿಕಾಸ ಸಂಸ್ಥೆ ಶಿರಸಿ ಮತ್ತು ನಬಾರ್ಡ್ ಬೆಂಗಳೂರು ಅವರ ಸಂಯೋಗದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಇತ್ತೀಚಿಗೆ ಪ್ರಾರಂಭವಾದ ಮೀನು ಉತ್ಪಾದಕರ ಮತ್ತು ಕೋಸ್ಟಲ್ ಮಾರ್ಟ್ ಉದ್ಘಾಟನಾ ಸಮಾರಂಭವು ಉಪ್ಪಂದ ಅಂಬಾಗಿಲಿನಲ್ಲಿ ನಡೆಯಿತು.
ಆನಂದ್ ಖಾರ್ವಿ ಉಪ್ಪುಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮನುವಿಕಾಸ ಸಂಸ್ಥೆಯು ಈ ಒಂದು ರೈತ ಉತ್ಪಾದಕ ಸಂಸ್ಥೆಯನ್ನು ಪ್ರಾರಂಭಿಸಿ ಕೇವಲ ಮೀನುಗಾರ ಮಹಿಳೆಯರಿಂದ ಅವರಿಗೆ ಬೇಕಾದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲು ಮತ್ತು ಅವರು ಮನೆಯಲ್ಲಿ ತಯಾರಿಸಿದ ಗೃಹ ಉತ್ಪನ್ನಗಳನ್ನು ಅಲ್ಲಿ ತಂದಿಟ್ಟು ಮಾರಾಟ ಮಾಡಲು ವೇದಿಕೆಯನ್ನು ಕಲ್ಪಿಸಿದ್ದು ಇದು ನಮ್ಮ ಭಾಗದಲ್ಲಿ ಒಂದು ವಿನೂತನ ಪ್ರಯತ್ನವಾಗಿದೆ.ಈ ಮಳಿಗೆಯು ಹೆಚ್ಚಿನ ಪ್ರಮಾಣದಲ್ಲಿ ಉನ್ನತಿಯನ್ನು ಹೊಂದಲಿ ಎಂದು ಶುಭ ಹಾರೈಸಿದರು.
ರಿಯಾಯಿತಿ ದರ ತ್ವರಿತ ಸೇವೆ, ಉತ್ಕೃಷ್ಟ ಗುಣಮಟ್ಟದ, ವಸ್ತುಗಳೆಲ್ಲವೂ ಒಂದೇ ಸೂರಿನಡಿಯಲ್ಲಿ ಸಿಗುತ್ತದೆ,
1000 ಅಧಿಕ ಸದಸ್ವತ್ವ ಹೊಂದಿರುವ ಈ ಸಂಸ್ಥೆಯು 350ಕೂ ಅಧಿಕ ಜನ ಸಂಸ್ಥೆಯಲ್ಲಿ ಶೇರು ಬಂಡವಾಳ ಹೊಂದಿದ್ದಾರೆ.
ನವರಾತ್ರಿ ಹಬ್ಬದ ವಿಶೇಷ ದಿನದಂದು ಗ್ರಾಹಕರಿಗೆ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ.
ರೂಪಾಯಿ 3000ರಿಂದ ರೂಪಾಯಿ 6000 ವರೆಗಿನ ಖರೀದಿದಾರರಿಗೆ ಆಕರ್ಷಕ ಬಹುಮಾನ,
ರೂಪಾಯಿ 6000ರಿಂದ 10000 ವರೆಗಿನ ಖರೀದಿದಾರರಿಗೆ ಅತ್ಯಾಕರ್ಷಕ ಬಹುಮಾನ,
ರೂಪಾಯಿ10000 ಮೇಲ್ಪಟ್ಟು ಬೆಲೆಯ ವಸ್ತುಗಳ ಖರೀದಿಗಾಗಿ ಅತ್ಯಮೂಲ್ಯ ಉಡುಗೊರೆ ಬೆಂಬಲಿತ ಗ್ರಾಹಕ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
ಮನುವಿಕಾಸ ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್ ಅವರು ಮಾತನಾಡಿ, ಮನವಿಕಾಸ ಸಂಸ್ಥೆ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ, ಸ್ವಸಹಾಯ ಸಂಘ ರಚಿಸುವ ಮೂಲಕ ತಮ್ಮ ಕೆಲಸವನ್ನು ಪ್ರಾರಂಭಿಸಿ, ಇದೀಗ ರೈತ ಉತ್ಪಾದಕ ಸಂಸ್ಥೆಯನ್ನು ಸಹ ಮಹಿಳೆಯರಿಗಾಗಿ ರಚಿಸಿಕೊಟ್ಟಿದೆ ಆದರೆ ಈ ಸಂಘಟನೆಯು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ವೇಗವಾಗಿ ಮತ್ತು ಸಂಘದ ಎಲ್ಲ ಮಹಿಳೆಯರ ಸಹಭಾಗಿತ್ವದಲ್ಲಿ ಉತ್ತಮವಾಗಿ ಆರಂಭಗೊಂಡಿದೆ.ಕೇವಲ ಈ ಮಳಿಗೆ ಉದ್ಘಾಟನೆಗೆ ಅವರು ತಮ್ಮ ಅನೇಕ ರೀತಿಯ ಶ್ರಮವನ್ನು ಹಾಕಿ, ತಾಲೂಕಿನ ಅತ್ಯಂತ ಪ್ರಚಾರ ಕೈಗೊಂಡು ಮಳಿಗೆಯ ಉದ್ಘಾಟನೆಯನ್ನು ವಿಜೃಂಭಣೆಯಿಂದ ನೆರವೇರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮದನ್ ಕುಮಾರ್ ಉಪ್ಪುಂದ, ಮೀನು ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ನಾಗವೇಣಿ ಮೊಗೇರ,ಶ್ರೀರಾಮ ಖಾರ್ವಿ,ಪ್ರಶಾಂತ್ ಜೆ,ರಾಜೇಶ್, ಸುರೇಶ್ ಎಚ್ ಖಾರ್ವಿ,ರಾಜು ಕೊಲ್ಲೂರು, ಸಂಸ್ಥೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು
ಮುಕ್ತ ಉಪ್ಪುಂದ ಸ್ವಾಗತಿಸಿದರು
ಭವ್ಯ ಉಪ್ಪುಂದ ನಿರೂಪಿಸಿದರು,
ಚಂದ್ರವತಿ ಶಿರೂರು ವಂದಿಸಿದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page