ಚಲಿಸುತ್ತಿದ್ದ ಸ್ಕೂಟರ್ ಮೇಲೆ ಮರದ ಕೊಂಬೆ ಮುರಿದು ಬಿದ್ದು:ಸವಾರನಿಗೆ ಗಾಯ

ಕುಂದಾಪುರ:ಸ್ಕೂಟರ್ ನಲ್ಲಿ ಗಂಗೊಳ್ಳಿ ಯಿಂದ ತ್ರಾಸಿ ಕಡೆಗೆ ಸಾಗುತ್ತಿದ್ದಾಗ ತ್ರಾಸಿ ಹೋಲಿ ಕ್ರಾಸ್ ಸಮೀಪ ಸ್ಕೂಟರ್ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಸ್ಕೂಟರ್ ಸವಾರ ಗಂಗೊಳ್ಳಿ ನಿವಾಸಿ,ಮಸೀದಿ ಧರ್ಮಗುರು ಜನಾಬ್ ಮೌಲಾನ ಮುಹಮ್ಮದ್ ಮತೀನ್ ಸಾಹಬ್ ಸಿದ್ದಿಕಿ (51) ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಿದ್ದಾರೆ.ತಲೆ ಹಾಗೂ ಕುತ್ತಿಗೆಗೆ ಗಾಯವಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.