ಬೆಣ್ಗೆರೆ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಸಂಭ್ರಮ






ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾಷಿಕ ಹಾಲು ಸೇವೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ನಡೆಯಿತು.ಶ್ರೀ ದೇವರಿಗೆ ಗೆಂಡಸೇವೆ,ತುಲಾಭಾರ ಸೇವೆ,ಮಹಾಪೂಜೆ,ಅನ್ನದಾನ ಸೇವೆ,ಸದರ್ಶನ ಸೇವೆ ಜರುಗಿತು,ಕುಂದಾಪುರ,ಬೈಂದೂರು ತಾಲೂಕು ಸಹಿತ ಘಟ್ಟದ ಮೇಲಿನ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಿ ಕಟ್ಟುಕಟ್ಟಲೆ ಸೇವೆಯನ್ನು ಸಲ್ಲಿಸಿದರು.ದೇವಸ್ಥಾನದ ಅಧ್ಯಕ್ಷರಾದ ಬಾಬು ಜೆ ಪೂಜಾರಿ ಉಪ್ಪುಂದ,ಉಪಾಧ್ಯಕ್ಷರಾದ ಎಸ್.ಕೆ ಪೂಜಾರಿ,ಕಾರ್ಯದರ್ಶಿ ನರಸಿಂಹ ಪೂಜಾರಿ,ಪಾತ್ರಿಗಳಾದ ನಾರಾಯಣ ಪೂಜಾರಿ,ನರಸಿಂಹ ಪೂಜಾರಿ,ಮಂಜು ಪೂಜಾರಿ,ಅರ್ಚಕ ಚಿಕ್ಕಯ್ಯ ಪೂಜಾರಿ, ಪದಾಧಿಕಾರಿಗಳು,ಪಾತ್ರಿಗಳು,ಅರ್ಚಕರು,ಗ್ರಾಮಸ್ಥರು,ನಂಬಿದ ಕುಟುಂಬಸ್ಥರು ಉಪಸ್ಥಿತರಿದ್ದರು.