ಬಿಜೆಪಿ ಪಕ್ಷದ ಕಾರ್ಯಕರ್ತರು ನನಗೆ ಶಕ್ತಿ ತುಂಬಿದ್ದಾರೆ:ಕೆ.ಎಸ್ ಈಶ್ವರಪ್ಪ

Share

Advertisement
Advertisement

ಕುಂದಾಪುರ:ರಾಜ್ಯದಲ್ಲಿ ಕುಟುಂಬ ರಾಜಕಾರಣವನ್ನು ತೊಲಗಿಸಬೇಕು ಹಾಗೂ ಬಿಜೆಪಿ ಪಕ್ಷವನ್ನು ಶುದ್ಧೀಕರಣ ಮಾಡುವ ದೃಷ್ಟಿಯಿಂದ,ನೊಂದ ಕಾರ್ಯಕರ್ತರಿಗೆ ನ್ಯಾಯವನ್ನು ದೊರಕಿಸಿ ಕೊಡುವ ಉದ್ದೇಶದಿಂದ ನಾನು ಇವೊಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ.ನೂರಕ್ಕೆ ನೂರು ತನ್ನ ಗೆಲುವು ನಿಶ್ಚಿತ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿ ರಾಷ್ಟ್ರಭಕ್ತರ ಬಳಗ ಮಾಜಿ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕುಂದಾಪುರ ತಾಲೂಕಿನ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಎಂಟು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಆರವತ್ತು ಪರ್ಸೆಂಟ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷ ಸಹಿತ ಜೆಡಿಎಸ್ ಪಕ್ಷದ ಕಾರ್ಯಕರ್ತರು,ಎಲ್ಲಾ ಸಮುದಾಯದ ಜನರು ನನಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.ಯಾವುದೆ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೋದಿ ಭಾವ ಚಿತ್ರವನ್ನು ಈಶ್ವರಪ್ಪನವರಿಗೆ ಬಳಸಿಕೊಳ್ಳಲು ಯಾವುದೇ ರೀತಿ ಹಕ್ಕು ಇಲ್ಲಾ ಎಂದು ಪ್ರಶ್ನಿಸಿದ ರಾಘವೇಂದ್ರ ಅವರಿಗೆ ಮಾತಿನ ಮೂಲಕ ಚಾಟಿ ಬಿಸಿದ ಈಶ್ವರಪ್ಪನವರು ನರೇಂದ್ರ ಮೋದಿ ಅವರು ರಾಘವೇಂದ್ರ ಅವರ ಅಪ್ಪನ ಆಸ್ತಿಯ ಎಂದು ಪ್ರಶ್ನಿಸಿದರು.ಚುನಾವಣೆ ಭಯದಿಂದ ಮೋದಿ ಅವರ ಹೆಸರಿನಲ್ಲಿ ಜನರನ್ನು ಹಾದಿ ತಪ್ಪಿಸುವ ಕೆಲಸವನ್ನು ಬಿ.ವೈ ರಾಘವೇಂದ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ನನಗೆ ಸಿಕ್ಕಿರುವ ಹಿಂದುತ್ವ ಬೆಂಬಲ ಹಾಗೂ ಸ್ತ್ರೀ ಸಾಮಾನ್ಯರ ಆಶೀರ್ವಾದ ದೊರಕಿರುವುದರಿಂದ ಇನ್ನಷ್ಟು ಶಕ್ತಿ ಬಂದಿದೆ ಎಂದು ಹೇಳಿದರು. ಕಳೆದ ನಲವತ್ತು ವರ್ಷಗಳಿಂದ ಹೋರಾಟದ ಮೂಲಕ ರಾಜಕೀಯದಲ್ಲಿ ಬೆಳೆದು ಬಂದಿದ್ದೇನೆ.ಬಿಜೆಪಿ ಪಕ್ಷ ಯಡ್ಯೂರಪ್ಪರವರ ವೈಯಕ್ತಿಕ ಆಸ್ತಿಯಲ್ಲ.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರತಿ ಭಾಗಕ್ಕೆ ಬೇಟಿ ನೀಡುತ್ತಿದ್ದೇನೆ.ಸಮಸ್ತ ಹಿಂದೂ ಕಾರ್ಯಕರ್ತರು ಸಂಘಟಿತರಾಗಿ ನನ್ನನ್ನು ಬೆಂಬಲಿಸುತ್ತಿದ್ದಾರೆ.ನನ್ನ ವಿರುದ್ದ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ಕುಟುಂಬ ನಡೆಸುತ್ತಿರುವ ಯಾವ ಷಡ್ಯಂತ್ರಕ್ಕೂ ಹೆದರಲಾರೆ.ಈ ಬಾರಿ ಚುನಾವಣೆಯಲ್ಲಿ ನೂರಕ್ಕೆ ನೂರು ಯಡ್ಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಸೋಲುವುದು ಖಚಿತ ಎಂದು ಈಶ್ವರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಶ್ರೀಧರ ಬಿಜೂರು,ಗೋಪಾಲಕೃಷ್ಣ ನಾಡ,ಕಟ್‍ಬೇಲ್ತೂರು ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್ ಪುತ್ರನ್,ಮೀನುಗಾರ ಮುಖಂಡ ಮೋಹನ್ ಖಾರ್ವಿ ಉಪ್ಪÅಂದ ಉಪಸ್ಥಿತರಿದ್ದರು.
ನಮ್ಮ ಜಾಲಾತಾಣದಲ್ಲಿ ಸುದ್ದಿ ಪ್ರಕಟಿಸಲು ಸಂಪರ್ಕಿಸಿ-9916284048

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page