ಮರವಂತೆ:ರೇಬಿಸ್ ಲಸಿಕಾ ಶಿಬಿರ ಕಾರ್ಯಕ್ರಮ
ಕುಂದಾಪುರ:ಪಶುಸಂಗೋಪನಾ ಇಲಾಖೆ ವತಿಯಿಂದ ಮರವಂತೆ ಗ್ರಾಮ ಪಂಚಾಯತ್ ಸಹಯೋಗದಲ್ಲಿ ರೇಬಿಸ್ ಲಸಿಕಾ ಶಿಬಿರ ಕಾರ್ಯಕ್ರಮ ಪಂಚಾಯತ್ ಆವರಣದಲ್ಲಿ ಮಂಗಳವಾರ ನಡೆಯಿತು.
ಮರವಂತೆ ಗ್ರಾ.ಪಂ ಅಧ್ಯಕ್ಷ ಲೋಕೇಶ್ ಖಾರ್ವಿ ಶಿಬಿರವನ್ನು ಉದ್ಘಾಟಿಸಿದರು.ಪಶು ವೈದ್ಯಾಕಾರಿ ಡಾ.ನಾಗರಾಜ್ ಖಾರ್ವಿ ಅವರು ರೇಬಿಸ್ ಲಸಿಕೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪೂಜಾರಿ,ಸದಸ್ಯೆ ವನಜಾ ಪೂಜಾರಿ,ಕಾರ್ಯದರ್ಶಿ ದಿನೇಶ್,ಸಿಬ್ಬಂದಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.