ಹೋಮ್ ಮೇಡ್ ಚಾಕಲೇಟ್ ತರಬೇತಿ ಸಮಾರೋಪ
ಕುಂದಾಪುರ:ರಾಷ್ಟೀಯ ಕೃಷಿ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮತ್ತು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಪ್ರಾಯೋಜಕತ್ವದಲ್ಲಿ ಹಾಗೂ ಹೊಸಾಡು ಗ್ರಾಮ ಪಂಚಾಯಿತಿ ಮತ್ತು ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹೊಸಾಡು ಸಹಭಾಗಿತ್ವದಲ್ಲಿ ಹತ್ತು ದಿನಗಳ ಕಾಲ ಹೊಸಾಡು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಹೋಮ್ ಮೇಡ್ ಚಾಕಲೇಟ್ ಮತ್ತು ಬೇಕರಿ ತಿನಿಸುಗಳ ತಯಾರಿ ಉತ್ಪನ್ನಗಳ ತರಬೇತಿ ಸಮಾರೋಪ ಕಾರ್ಯಕ್ರಮ ಶನಿವಾರ ನಡೆಯಿತು.ಕುಂದಾಪುರ ತಾಲೂಕು ಪಂಚಾಯಿತಿ ಇಒ ಶಶಿಧರ,ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್,ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಯಶೋಧ,ಚಿತ್ತಾರ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ವಿಜಯ,ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಪ್ರತಿಮಾ,ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಕುಂದಾಪುರ ಆಶಾಲತಾ ಉಪಸ್ಥಿತರಿದ್ದರು.ಸವಿತಾ ಸ್ವಾಗತಿಸಿದರು.ವಸಂತಿ ನಿರೂಪಿಸಿದರು.ರಾಘವೇಂದ್ರ ವಂದಿಸಿದರು.ತರಬೇತಿಯಲ್ಲಿ ಭಾಗವಹಿಸಿದ ಸ್ವ-ಸಹಾಯ ಸಂಘದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.