ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ:ವಿದ್ಯುತ್ ಸಂಪರ್ಕ ವ್ಯವಸ್ಥೆ ಸರಿಪಸಿದ ಮೆಸ್ಕಾಂ ಸಿಬ್ಬಂದಿಗಳು
ಕುಂದಾಪುರ:ಭಾರಿ ಗಾಳಿ ಮಳೆಗೆ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯಕವಾಡಿ ರವೀಂದ್ರ ಆಚಾರಿ ಮನೆ ಬಳಿ ವಿದ್ಯುತ್ ಲೈನ್ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ತುಂಡಾಗಿದೆ ಹಾಗೂ ಕೊಡಪಾಡಿ ಅಮ್ಮು ಪೂಜಾರಿ ಮನೆ ಬಳಿ ಹಾದು ಹೋಗಿರುವ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಧರೆಗೆ ಉರುಳಿ ಬಿದ್ದಿದೆ.ಮೆಸ್ಕಾಂ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿದರು.
ಗಂಗೊಳ್ಳಿ:ಶಾಂತನಕೇರಿ ಎಂಬಲ್ಲಿ ಎರಡು ವಿದ್ಯುತ್ ಕಂಬಗಳು ತುಂಡಾಗಿ ಧರೆಗೆ ಉರುಳಿ ಬಿದ್ದಿದೆ.ಗಂಗೊಳ್ಳಿ ಮೆ.ಸ್ಕಾಂ ಸಿಬ್ಬಂದಿಗಳು ಹೊಸ ಕಂಬಗಳನ್ನು ಹುಗಿದು ವಿದ್ಯುತ್ ಸಂರ್ಪ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ.
(ನಾಯಕವಾಡಿ ರವೀಂದ್ರ ಆಚಾರಿ ಮನೆ ಬಳಿ ವಿದ್ಯುತ್ ಲೈನ್ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ತುಂಡಾಗಿದೆ)