ಹಸಿರು ಹೊರೆ ಕಾಣಿಕೆ ಸಮರ್ಪಣೆ
ಕುಂದಾಪುರ:ತಾಲೂಕಿನ ಕನ್ಯಾನ ಗ್ರಾಮದ ಕೂಡ್ಲು ಬಾಡಬೆಟ್ಟು ಶ್ರೀಶನೀಶ್ವರ,ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ 14 ರ ಭಾನುವಾರದಂದು ನಡೆಯಲಿರುವ ಅಷ್ಟಬಂಧ ನಾಗಮಂಡಲೋತ್ಸ ಕಾರ್ಯಕ್ರಮದ ಅಂಗವಾಗಿ ಹಸಿರು ಹೊರೆ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ಬುಧವಾರ ನಡೆಯಿತು.
ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ಅವರು ಹಸಿರು ಹೊರೆ ಕಾಣಿಕೆ ಮೆರವಣಿಗೆ ಚಾಲನೆಯನ್ನು ನೀಡಿ ಮಾತನಾಡಿ,ಕೂಡ್ಲು ಬಾಡಬೆಟ್ಟು ಶ್ರೀಶನೀಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಕ್ಕೆ ಭಕ್ತಾಬಿಮಾನಿಗಳಿಂದ ತುಂಬು ಹೃದಯಿಂದ ಹೊರೆ ಕಾಣಿಕೆಯನ್ನು ಪಡೆದುಕೊಳ್ಳಲಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನಾಗಮಂಡಲ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಂಡರು.
ಕರಾವಳಿ ಭಾಗದಲ್ಲಿ ನಾಗನಿಗೆ ವಿಶೇಷವಾದ ಪ್ರಾದಿನ್ಯತೆ ಇದೆ ಸಂತಾನ ಪ್ರಾಪ್ತಿಗಾಗಿ,ಆರೋಗ್ಯಕ್ಕಾಗಿ,ಇಷ್ಟಾರ್ಥ ಸಿದ್ಧಿಗಾಗಿ ನಾಗಮಂಡಲವನ್ನು ಮಾಡಲಾಗುತ್ತದೆ.ಭಕ್ತರು ನಾಗದೇವರ ಮೇಲೆ ಇಟ್ಟಿರುವ ಭಕ್ತಿಯ ರೂಪ ಕೂಡ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಜಯರಾಮ ಸ್ವಾಮಿ,ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.