ಮೀನುಗಾರಿಕಾ ಬೋಟ್ ಅವಘಡ,ಲಕ್ಷಾಂತರ.ರೂ ನಷ್ಟ
ಕುಂದಾಪುರ:ಭಟ್ಕಳ ತಾಲೂಕಿನ ಭಾಗದ ಸಮುದ್ರದಲ್ಲಿ ಶುಕ್ರವಾರ ಬೆಳಗಿನ ಜಾವಾ 5 ಗಂಟೆ ಸುಮಾರಿಗೆ ಗೋಪಾಲ ಸುವರ್ಣ ವಡಭಾಂಡೇಶ್ವರ ಮಲ್ಪೆ ಎಂಬುವವರ ಮಾಲೀಕತ್ವದ ಮಾಲ್ತೀ ದೇವಿ-2 ಎನ್ನುವ ಬೋಟ್‍ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ.ಅದೆ ಮಾರ್ಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದುರ್ಗಾ ಎನ್ನುವ ಬೋಟ್ ಡಿಕ್ಕಿ ಹೊಡೆದ ಪರಿಣಾಮ ಮಾಲ್ತೀ ದೇವಿ-2 ಎನ್ನುವ ಬೋಟ್‍ಗೆ ತೀವೃ ಸ್ವರೂಪದಲ್ಲಿ ಹಾನಿ ಉಂಟಾಗಿದ್ದು 20 ಲಕ್ಷ.ಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಬೋಟ್ ದುರಂತದಲ್ಲಿ ಮೀನುಗಾರರು ಪಾರಾಗಿದ್ದಾರೆ.ಮಂಜು ಮುಸುಕಿದ ವಾತಾವರಣವೆ ದುರ್ಘಟನೆ ಸಂಭವಿಸಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಡಿಸೇಲ್ ಸೋರಿಕೆ ಭೀತಿ:ಗಂಗೊಳ್ಳಿ ಅಳಿವೆ ಸಮೀಪ 10 ಮಾರು ದೂರದಲ್ಲಿ ಮುಳುಗಿರುವ ಮಾಲ್ತೀ ದೇವಿ-2 ಬೋಟ್‍ನ ಟ್ಯಾಂಕ್‍ನಲ್ಲಿ 2,500 ಲೀಟರ್ ಡಿಸೇಲ್ ತುಂಬಿದೆ.ನೀರಿನ ಹೊಡೆತಕ್ಕೆ ಡಿಸೇಲ್ ಟ್ಯಾಂಕ್ ಒಡೆದರೆ ಸಮುದ್ರದಲ್ಲಿ ಡಿಸೇಲ್ ಸೋರಿಕೆ ಆಗುವ ಭೀತಿ ಎದುರಾಗಿದೆ.ಬೋಟ್ ರಕ್ಷಣಾ ಕಾರ್ಯಚರಣೆಯಲ್ಲಿ ಮುಳುಗು ತಜ್ಞ ದಿನೇಶ್ ಖಾರ್ವಿ ಲೈಟ್‍ಹೌಸ್ ಗಂಗೊಳ್ಳಿ ಮತ್ತು ವೆಂಕಟೇಶ್ ಖಾರ್ವಿ,ಸಚಿನ್ ಖಾರ್ವಿ,ಶರತ್ ಖಾರ್ವಿ,ಗಂಗೊಳ್ಳಿ ಸಿಎಸ್‍ಪಿ ನಂಜಪ್ಪ ಎನ್.ಪಿ.ಐ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.