ಸರಕಾರದ ಮಟ್ಟದಲ್ಲಿ ಮಾತನಾಡಿ ಕಾನೂನನ್ನು ಸರಿಪಡಿಸುವ ಕೆಲಸವನ್ನು-ಮಾಡಲಾಗುವುದು ಕೆ.ಗೋಪಾಲ ಪೂಜಾರಿ

Share

ಕುಂದಾಪುರ:1994 ರ ಕಾರ್ಯಾದೇಶವನ್ನು ಮಾರ್ಚ್ ತಿಂಗಳಿನಲ್ಲಿ ಆಗಿನ ಸರಕಾರ ರದ್ದು ಮಾಡಿರುವುದರಿಂದ ಇವೊಂದು ಸಮಸ್ಯೆ ಹುಟ್ಟಿಕೊಂಡಿದೆ.ಸರಕಾರದ ಮಟ್ಟದಲ್ಲಿ ಮಾತನಾಡಿ ಕಾನೂನನ್ನು ಸರಿಪಡಿಸುವ ಕೆಲಸವನ್ನು ಮಾಡಲಾಗುವುದು ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಆರೋಪಿಸಿದರು.
ಕುಂದಾಪುರ ಮತ್ತು ಬೈಂದೂರು ತಾಲೂಕು ಲಾರಿ ಮತ್ತು ಟೆಂಪೋ ಚಾಲಕರ ಸಂಘದ ವತಿಯಿಂದ ಹೆಮ್ಮಾಡಿಯಲ್ಲಿ ನಡೆಯುತ್ತಿರುವ 3ನೇ ದಿನದ ಕಟ್ಟಡ ಸಾಮಾಗ್ರಿ ಸಾಗಾಟದ ವಾಹನಗಳ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಶುಕ್ರವಾರ ಭಾಗವಹಿಸಿ ಅವರು ಮಾತಾಡಿದರು.
ಕಾನೂನು ಬಾಹಿರ ಚಟುವಟಕೆಗಳನ್ನು ನಡೆಸಲು ನಮ್ಮ ಸರಕಾರ ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಲೀಗಲ್ ಆಗಿ ಕೆಲಸ ಮಾಡಲು ಅವಕಾಶವಿರುವುದರಿಂದ ಜಿಲ್ಲೆಯ ಪರಿಸ್ಥಿತಿಯನ್ನು ಸರಕಾರದ ಗಮನಕ್ಕೆ ತಂದು ನಿರ್ಬಂಧಿಸಿದ ಕಾನೂನನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿನಂತಿಸಿಕೊಳ್ಳಲಾಗುವುದು,ಈಗಾಗಲೇ ಡಿಸಿ,ಎಸ್ಪಿ ಮತ್ತು ಗಣಿ ಇಲಾಖೆ ಅವರೊಂದಿಗೆ ಮಾತನಾಡಲಾಗಿದೆ.ಮರಳಿನ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಯಾವ ಭಾಗದಲ್ಲಿ ಮರಳನ್ನು ತೆಗೆಯಲು ಸವಕಾಶವಿದೆಯೊ ಅಂತಹ ಸ್ಥಳಗಳಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಪರ್ಮಿಟ್ ಕೊಟ್ಟು ಜಿಪಿಎಸ್ ಮಾಡಿ ಅವಕಾಶ ಮಾಡಿಕೊಳ್ಳಲು ವಿನಂತಿಸಲಾಗುವುದು ಎಂದು ಹೇಳಿದರು.ಮಣ್ಣಿನ ಸಾಗಾಟಕ್ಕೆ ಸಂಬಂಧಪಟ್ಟಂತೆ ಜಿಪಿಎಸ್ ಅಳವಡಿಕೆ ನಿಯಮವನ್ನು ತೆಗೆದು ಹಾಕುವಂತೆ ಸರಕಾರದ ಬಳಿ ಕೇಳಿ ಕೊಳ್ಳಲಾಗುದೆಂದರು.
ಕುಂದಾಪುರ ಮತ್ತು ಬೈಂದೂರು ತಾಲೂಕು ಲಾರಿ ಮತ್ತು ಟೆಂಪೋ ಮಾಲಕರು ಮತ್ತು ಚಾಲಕ ಸಂಘದ ಜಂಟಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಮಾತನಾಡಿ,ಬೇಡಿಕೆಗಳು ಇಡೇರುವ ತನಕ ಮುಷ್ಕರವನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಈ ಸಂದರ್ಭ ಸಂಘದ ಜಂಟಿ ಅಧ್ಯಕ್ಷ ದಿವಾಕರ ಶೆಟ್ಟಿ ನೈಲಾಡಿ,ರಾಘವೇಂದ್ರ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page