ತ್ರಾಸಿ ಬೀಚ್ನಲ್ಲಿ ಜೆಸ್ಕಿ ರೈಡ್ ಪಲ್ಟಿ:ಜೆಸ್ಕಿ ಡ್ರೈವರ್ ಸಮುದ್ರದಲ್ಲಿ ನಾಪತ್ತೆ,ಪ್ರವಾಸಿಗ ಪಾರು
ಕುಂದಾಪುರ:ಸಮುದ್ರದಲ್ಲಿ ಜೆಸ್ಕಿ ರೈಡ್ ಮೂಲಕ (ವಾಟರ್ ಬೈಕ್) ಡ್ರೈವ್ ಮಾಡುತ್ತಿದ್ದ ಸಂದರ್ಭದಲ್ಲಿ ಅಲೆಯ ಹೊಡೆತಕ್ಕೆ ಜೆಸ್ಕಿ ರೈಡ್ ಸಮುದ್ರದಲ್ಲಿ ಉರುಳಿ ಬಿದ್ದ ಪರಿಣಾಮ ಜೆಸ್ಕಿ ರೈಡ್ ಡ್ರೈವರ್ ಮುರುಡೇಶ್ವರ ಮೂಲದ ನಿವಾಸಿ ರೋಹಿದಾಸ್ (41) ಸಮುದ್ರದಲ್ಲಿ ನಾಪತ್ತೆಯಾಗಿರುವ ಘಟನೆ ಶನಿವಾರ ತ್ರಾಸಿ ಬೀಚ್ನಲ್ಲಿ ನಡೆದಿದೆ.
ಶನಿವಾರ ಸಂಜೆ 5.30 ರ ಸುಮಾರಿಗೆ ಜೆಸ್ಕಿ ರೈಡ್ ಡ್ರೈವರ್ ರೋಹಿದಾಸ್ ಅವರು ಒರ್ವ ಪ್ರವಾಸಿಗನನ್ನು ಜೆಸ್ಕಿ ರೈಡ್ನಲ್ಲಿ ಕುಳ್ಳಿರಿಸಿ ಕೊಂಡು ಸಮುದ್ರದಲ್ಲಿ ರೈಡ್ ಮಾಡುತ್ತಿದ್ದ ಸಮಯದಲ್ಲಿ ಸಮುದ್ರ ತೀರ ದಿಂದ ಅಂದಾಜು 150 ರಿಂದ 200 ಮೀಟರ್ ದೂರದಲ್ಲಿ ಅಲೆಯ ಹೊಡೆತಕ್ಕೆ ಜೆಸ್ಕಿ ರೈಡ್ ಸಮುದ್ರದಲ್ಲಿ ಪಲ್ಟಿ ಹೊಡೆದಿದೆ.ಘಟನೆಯಲ್ಲಿ ಜೆಸ್ಕಿ ರೈಡ್ ಡ್ರೈವರ್ ಸೇರಿ ಪ್ರವಾಸಿಗ ನೀರಿನಲ್ಲಿ ಮುಳುಗಿದ್ದಾರೆ.ಪ್ರವಾಸಿಗ ಪಾರಾಗಿದ್ದಾನೆ.